ಶಾರ್ಟ್ ಸರ್ಕ್ಯೂಟ್: 4 ಗುಡಿಸಲು ಭಸ್ಮ
ಬಳ್ಳಾರಿ: ತಾಲೂಕಿನ ಎತ್ತಿನಬೂದಿಹಾಳ ಕ್ರಾಸ್ ಸಮೀಪದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ನಾಲ್ಕು ಗುಡಿಸಲು ಸುಟ್ಟು ಸುಮಾರು ರು. 9 ಲಕ್ಷದಷ್ಟು ಹಾನಿಯಾಗಿರುವ ಘಟನೆ ನಡೆದಿದೆ. ಎತ್ತಿನಬೂದಿಹಾಳ ಕ್ರಾಸ್ನಲ್ಲಿರುವ ಶ್ರೀನಿವಾಸ್ ರಾವ್, ಶಿವಪಾರ್ವತಿ, ವಿ. ಸುಬ್ಬರಾವ್, ಜಿ. ಸುರೇಶ್ ಅವರಿಗೆ ಸೇರಿದ ಗುಡಿಸಲು ಸುಟ್ಟು ಭಸ್ಮವಾಗಿವೆ.
ಶುಕ್ರವಾರ ರಾತ್ರಿ ಏಕಾಏಕಿ ಗುಡಿಸಲುಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ನೋಡು ನೋಡುತ್ತಿದ್ದಂತೆ ಬೆಂಕಿ ಜ್ವಾಲೆ ನಾಲ್ಕು ಗುಡಿಸಲುಗಳಿಗೆ ವ್ಯಾಪಿಸಿದೆ. ಗುಡಿಸಲುಗಳಲ್ಲಿದ್ದ 120 ರಾಸಾಯನಿಕಗೊಬ್ಬರದ ಚೀಲಗಳು, 4 ಟಿವಿ, ರು. 60 ಸಾವಿರ ನಗದು, 50 ಗ್ರಾಂ ಚಿನ್ನ, ರು. 2 ಲಕ್ಷ ಮೌಲ್ಯದ ಕ್ರಿಮಿನಾಶಕ, ಪಂಪ್ಸೆಟ್ಗಳು ಸೇರಿದಂತೆ ರು. 9 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಗುಡಿಸಲು ವಾಸಿಗಳು ಬೀದಿಗೆ ಬಿದ್ದಂತಾಗಿದೆ.
ಗುಡಿಸಲು ಸುಟ್ಟಾಗ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದಾಗ, ಅಗ್ನಿಶಾಮಕ ದಳವು ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಗುಡಿಸಲು ಸುಟ್ಟು ಭಸ್ಮವಾಗಿದ್ದವು.