ಸಿದ್ದು ಜನ್ಮದಿನಾಚರಣೆ
ಬಳ್ಳಾರಿ: ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 66ನೇ ಜನ್ಮದಿನಾಚರಣೆಯನ್ನು ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಸೋಮವಾರ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ನೇಹ ಸಂಪುಟದ ಉಪಾಧ್ಯಕ್ಷ, ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ ಮಾತನಾಡಿದರು. ರಾಜ್ಯ ಯುವ ಕಾಂಗ್ರೆಸ್ ಮುಖಂಡ ಬೆಣಕಲ್ ಮಲ್ಲಿಕಾರ್ಜುನ ಪಾಟೀಲ್, ಕಂದಾರಿ ನಾಗರಾಜ್, ಜೆ.ಜೆ. ಶಿವಕುಮಾರ್, ಶ್ರೀಧರಗಡ್ಡೆ ರುದ್ರಪ್ಪ, ಕುರುಗೋಡು ಚನ್ನಬಸವರಾಜ್, ಎನ್.ಟಿ.ಆರ್. ಬಸವರಾಜ್, ಕುಡಿತಿನಿ ರಾಮಾಂಜಿನಿ, ಜಯರಾಂ, ಯುವ ಮುಖಂಡರಾದ ಯೂಸುಫ್, ನರಹರಿ, ತಾಜುದ್ದೀನ್, ವೀರೇಶ್, ಕೇಶವ, ಧನಂಜಯ, ಅಂದೇಶ್ ಕುರಿ, ಶಿವರಾಮ, ರಾಮು, ಗಾದಿ, ರಾಜ, ಮಲಕಪ್ಪ ಹಾಗೂ ಇತರರಿದ್ದರು ಎಂದು ಯುವ ಕಾಂಗ್ರೆಸ್‌ನ ಜೆ.ವಿ. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.