ಮಟ್ಕಾ ಅಡ್ಡೆ ಮೇಲೆ ದಾಳಿ: 10 ಜನರ ಬಂಧನ
ಬಳ್ಳಾರಿ: ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆ ಮೇಲೆ ಗಾಂಧಿನಗರ ಪೊಲೀಸರು ದಾಳಿ ಮಾಡಿ, 10 ಜನರನ್ನು ಬಂಧಿಸಿ, ಅವರಿಂದ ರು. 4200 ನಗದು, 8 ಮೊಬೈಲ್, ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಗರದ ರೇಲ್ವೆ ಗೂಡ್ಸ್ ಸೆಟ್ನ ಸಾರ್ವಜನಿಕ ಸ್ಥಳದಲ್ಲಿ ಡಿಎಸ್ಪಿ ಮುರುಗಣ್ಣನವರ್, ಇನ್ಸ್ಪೆಕ್ಟರ್ ಜೈಕುಮಾರ್ ಮಾರ್ಗದರ್ಶನದಲ್ಲಿ ಗಾಂಧಿನಗರ ಠಾಣೆ ಪಿಎಸ್ಐ ವಾಸುಕುಮಾರ್ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಪಂಪಾಪತಿ, ಅನಿಲ್, ಸೂರ್ಯಪ್ರಕಾಶ್, ಇಸ್ಮಾಯಿಲ್ ಸೇರಿದಂತೆ ಸುಮಾರು 10 ಜನರನ್ನು ಬಂಧಿಸಿ, ಅವರಿಂದ ರು. 4200 ನಗದು, 8 ಮೊಬೈಲ್, ಒಂದು ಬೈಕನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.