ವೃದ್ಧ ಕಾಣೆ: ದೂರು ದಾಖಲು
ಬಳ್ಳಾರಿ: ತಾಲೂಕಿನ ಪಿ.ಡಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆ. ತಿಪ್ಪಯ್ಯ (65) ಎಂಬ ವೃದ್ಧ ಕಾಣೆಯಾದ ವರದಿಯಾಗಿದೆ. ಆ. 11ರ ಬೆಳಗ್ಗೆ 11.30ಕ್ಕೆ ಈತನು ಕಾಣೆಯಾಗಿದ್ದಾನೆ.
ಈ ಕುರಿತು ಆತನ ಪುತ್ರ ಪಿಡಿಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಮನೆಗೆ ಭಾರವಾಗಿದ್ದೇನೆಂದು ಜೀವನದಲ್ಲಿ ಜಿಗುಪ್ಸೆಗೊಂಡ ಈತನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿದ್ದಾನೆ. ಕನ್ನಡ, ತೆಲುಗು ಭಾಷೆ ಬಲ್ಲವನಾಗಿದ್ದಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಪಿ.ಡಿ.ಹಳ್ಳಿ ಠಾಣೆ ದೂ.ಸಂ-08392-265010, 256100, 276461, ಮೊ.ಸಂ-9480803052, 9480803031ಗೆ ಸಂಪರ್ಕಿಸುವಂತೆ ಠಾಣೆಯ ಪಿಎಸ್‌ಐ ಮನವಿ ಮಾಡಿದ್ದಾರೆ.