ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದೇಶದ ಪ್ರಗತಿಗೆ ಶ್ರಮಿಸೋಣ

Lingaraj Badiger
Updated On : 16 Aug 2013, 11:45 am

ಕಂಪ್ಲಿ: ದೇಶದ ಸಂಸ್ಕೃತಿ, ನೆಲ, ಜಲ, ಭಾಷೆ ಸಂರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದ್ದು, ದೇಶದ ಪ್ರಗತಿಗೆ ಎಲ್ಲರೂ ಶ್ರಮಿಸೋಣ ಎಂದು ಶಾಸಕ ಟಿ.ಎಚ್. ಸುರೇಶಬಾಬು ಹೇಳಿದರು.
ಪಟ್ಟಣದ ಎಸ್‌ಎಂ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಪುರಸಭೆ ಆಡಳಿತ ಗುರುವಾರ ಹಮ್ಮಿಕೊಂಡಿದ್ದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಹಾಗೂ ಧ್ವಜ ವಂದನೆ ಸಲ್ಲಿಸಿ ಮಾತನಾಡಿದ ಅವರು, ಭಾರತೀಯರಾದ ನಾವು ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಿ ಮುಂಚೂಣಿಯಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು. ವಿದ್ಯೆ ಇದ್ದರೆ ಮಾತ್ರ ಮುಂದಿನ ಜೀವನ ಹಾಗೂ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.
ಎಸ್.ಎಂ. ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಬಿ. ಓಬಳೇಶ ಹಾಗೂ ಉಪ ಪ್ರಾಚಾರ್ಯ ಶೇಖರ್ ಹೊರಪೇಟೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭ ಮುಸ್ಲಿಂ ಮುಖಂಡ ಜೆ. ಮೊಹಿದ್ದೀನ್ ಎಸ್.ಎಂ. ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಕ್ಷೀರಭಾಗ್ಯ ಹಾಲು ಕುಡಿಯಲು 300 ಲೋಟಗಳನ್ನು ಕೊಡುಗೆಯಾಗಿ ನೀಡಿದರು. ಇನ್ನಿಬ್ಬರು ಮುಸ್ಲಿಂ ಮುಖಂಡರಾದ ವಲಿ ಅಹ್ಮದ್ ಸಾಬ್ ಮತ್ತು ಶಬ್ಬೀರ್ ಬೇಗ್ ಭರತ ನಾಟ್ಯ ಪ್ರದರ್ಶಿಸಿದ ವಿದ್ಯಾರ್ಥಿನಿ ಬೃಂದಾಗೆ ನಗದು ಹಣ ನೀಡಿ ಪ್ರೋತ್ಸಾಹಿಸಿದರು.
ವಿದ್ಯಾರ್ಥಿನಿಯರಾದ ಅಮೃತ, ಮೇಘನಾ, ಜೀವಿಕಾ, ಶಾಂತಲಾ ಭರತ ನಾಟ್ಯ ಪ್ರದರ್ಶಿಸಿದರು. ವಿಸೃತ್ ಅಳವಂಡಿ ಸಂಗಡಿಗರು ದೇಶಭಕ್ತಿ ಗೀತೆ ಹಾಡಿದರು. ವಿವಿಧ ಕ್ರೀಡೆ, ಸ್ಪರ್ಧೆಗಳಲ್ಲಿ ವಿಜೇತರಾದ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪಥ ಸಂಚಲನ ನಡೆಸಿದ ಕಂಪ್ಲಿಯ ಎಲ್ಲಾ ಶಾಲೆ ಮಕ್ಕಳು, ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ, ಗೃಹರಕ್ಷಕ ದಳದವರಿಂದ ಶಾಸಕರು ವಂದನೆ ಸ್ವೀಕರಿಸಿದರು.
ಎನ್. ಪುರುಷೋತ್ತಮ, ಎ. ವೀರೇಶಪ್ಪ, ಧನವಂತಪ್ಪ, ಕೆ. ವೆಂಕಟರಾಮರಾಜು, ಸಿಡಿ ಮಹಾದೇವ, ಕೆ. ಬಾಲಪ್ಪ,  ಆರ್. ಹನುಮಂತಪ್ಪ, ಪಿಎಸ್‌ಐ ಎನ್. ಆನಂದ್, ಕೆ.ಬಿ. ಬೀರಣಗಿ, ಸದಸ್ಯರಾದ ಕೆ. ಸರಸ್ವತಮ್ಮ, ಎನ್. ರಾಮಾಂಜನೇಯಲು, ಸಣ್ಣ ಹುಲುಗಪ್ಪ, ವಾಲ್ಮೀಕಿ ರಘು, ಎಸ್. ರಾಘವೇಂದ್ರ, ಎಂ. ರಾಜೇಶ, ಗೆಜ್ಜೆಳ್ಳಿ ಭಾಷಾ, ಬಿ. ಸಿದ್ದಪ್ಪ, ಪಿ. ಬ್ರಹ್ಮಯ್ಯ, ಟಿ. ಲಿಂಗಾರೆಡ್ಡಿ, ಯು. ರಾಮದಾಸ, ಎ.ಸಿ. ದಾನಪ್ಪ, ಡಾ೤ ವೆಂಕಟೇಶ ಸಿ. ಭರಮಕ್ಕನವರ್, ಎನ್. ಮಲ್ಲಿಕಾರ್ಜುನರೆಡ್ಡಿ, ಟಿ. ಕೋಟಿರೆಡ್ಡಿ, ಎನ್. ಚಂದ್ರಕಾಂತರೆಡ್ಡಿ, ಶಿವಶಂಕರರೆಡ್ಡಿ, ಎಸ್. ಪದ್ಮಾವತೆಮ್ಮ, ಉಪ್ಪಾರು ಲಕ್ಷ್ಮಿ, ಎಸ್.ಜಿ. ಚಿತ್ರಗಾರ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement