ಅಂಬೇಡ್ಕರ್ ಭವನಕ್ಕೆ ಭೂಮಿಪೂಜೆ
ಕೂಡ್ಲಿಗಿ: ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣದಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಹಾಗೂ ವಾಲ್ಮೀಕಿ ಭವನ ನಿರ್ಮಿಸಲಾಗುತ್ತಿದ್ದು, ಅಂಬೇಡ್ಕರ್ ಮತ್ತು ಜಗಜೀವನ್ ರಾಂ ಭವನವನ್ನು ತಲಾ ರು. 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಬಿ. ನಾಗೇಂದ್ರ ಹೇಳಿದರು.
ಪಟ್ಟಣದಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೆ 2 ಭವನ ನಿರ್ಮಾಣಕ್ಕೆ ತಲಾ ರು. 50 ಲಕ್ಷ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವುದು ಎಂದರು.
ಜಿಪಂ ಸದಸ್ಯ ಕೆ.ಎಂ. ಶಶಿಧರ, ಮೀನಾಕ್ಷಮ್ಮ ವಿಠೋಬಯ್ಯ, ಪ್ರಭಾರಿ ತಹಸೀಲ್ದಾರ್ ಪ್ರಮೋದ್, ಸಮಾಜ ಕಲ್ಯಾಣಾಧಿಕಾರಿ ಮಾಣಿಕ್ಯಾಚಾರ್, ಹಿರೇಕುಂಬಳಗುಂಟೆ ಉಮೇಶ್, ಬಿ. ಭೀಮೇಶ್, ಪಪಂ ಸದಸ್ಯರಾದ ಎಸ್. ದುರುಗೇಶ್, ಬಷೀರ್ ಅಹ್ಮದ್, ಶಿವಣ್ಣ ಸಾಲುಮನಿ, ಗೆದ್ದಲಗಟ್ಟೆ ಬಿ. ಹನುಮೇಶ್, ಎಚ್. ಪರುಶುರಾಂ, ಬಿ. ರಾಘವೇಂದ್ರ, ಬಂಗಾರಿ ಹನುಮಂತು, ಅಜ್ಜಣ್ಣ, ಗುಡೇಕೋಟೆ ರಾಜಣ್ಣ, ಸಿದ್ದಪ್ಪ, ಕಲ್ಲಹಳ್ಳಿ ಬಸಪ್ಪ, ಎಚ್.ಪಿ. ದುರುಗಪ್ಪ, ತಿಪ್ಪೇಸ್ವಾಮಿ, ಉಜ್ಜಿನಿ ಲೋಕೇಶ್, ಸಾಲುಮನಿ ರಾಘವೇಂದ್ರ ಇದ್ದರು.