ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ

Mainashree
Updated On : 18 Aug 2013, 12:04 pm

ಹೂವಿನಹಡಗಲಿ: ಇಲ್ಲಿನ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಲೂಕ ಪಂಚಾಯಿತಿ, ಶಿಕ್ಷಣ ಹಾಗೂ ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಆಯೋಜಿಸಲಾಗಿತ್ತು.
ತಾಪಂ ಅಧ್ಯಕ್ಷೆ ಪಿ. ದುರುಗಮ್ಮ ಮತ್ತು ತಹಸೀಲ್ದಾರ್ ವಿಜಯಕುಮಾರ್ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಹಸೀಲ್ದಾರ್ ವಿಜಯಕುಮಾರ ಮಾತನಾಡುತ್ತ, ಜೈವಿಕ ಇಂಧನ ಮರಗಳನ್ನು ಬೆಳೆಸುವುದು ಮತ್ತು ಅದರ ಸದುಪಯೋಗದ ಕುರಿತು ಮಾಹಿತಿ ನೀಡಿದರು.
ತಾಪಂ ಇಒ ಸಿದ್ದೇಶ್ವರ ಮಾತನಾಡಿ, ಪರಿಸರದ ಮಹತ್ವ ಹಾಗೂ ರಕ್ಷಣೆ ಕುರಿತು ವಿವರಿಸಿದರು. ಕಾಲೇಜು ಪ್ರಾಚಾರ್ಯ ಕೋರಿ ಹಾಲೇಶ, ಕೃಷಿ ವಿಸ್ತರಣಾ ಮುಂದಾಳು ಡಾ. ಚಂದ್ರಕಾಂತ ಕಾಲಿಬಾವಿ, ಜೈವಿಕ ಇಂಧನ ಗಿಡಗಳ ಪರಿಚಯ, ಉಪಯೋಗದ ಬಗ್ಗೆ ಉಪನ್ಯಾಸ ನೀಡಿದರು.
ಸಾಮಾಜಿಕ ವಲಯ ಅರಣ್ಯಾಕಾರಿ ಎಸ್.ಡಿ. ಬಬಲಾದಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ತಾಪಂ ಅಧ್ಯಕ್ಷೆ ಪಿ. ದುರುಗಮ್ಮ ಅಧ್ಯಕ್ಷತೆ ವಹಿಸಿದ್ದರು. ಎನ್‌ಜಿಒ ಅಧ್ಯಕ್ಷ ಎ. ಕೊಟ್ರಗೌಡ, ಬಿಇಒ ವಿಜಯಕುಮಾರ, ಉಪಪ್ರಾಚಾರ್ಯ ಈ. ವಾಸಪ್ಪ, ಅರಣ್ಯ ಇಲಾಖೆಯ ಅಮರೇಶ, ಸುಲೇಮಾನ್ ಮತ್ತು ಸಿಬ್ಬಂದಿ, ಕಾಲೇಜಿನ ಉಪನ್ಯಾಸಕ, ಶಿಕ್ಷಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಲಯ ಅರಣ್ಯಾಕಾರಿ ಬಿ.ಪಿ. ದುದ್ದಗಿ, ಉಪನ್ಯಾಸಕ ಬಿ. ಪ್ರಕಾಶ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement