ಕ್ರೀಡೆಗಳಿಂದ ಮಾನಸಿಕ, ಬೌದ್ಧಿಕ ಬೆಳವಣಿಗೆ: ಭೀಮಾನಾಯ್ಕ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 17
ಕ್ರೀಡೆಗಳು ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿರುವ ಜತೆಗೆ ಆತ್ಮಸ್ಥೈರ್ಯವನ್ನು ವೃದ್ಧಿಸುತ್ತವೆ ಎಂದು ಶಾಸಕ ಎಸ್. ಭೀಮಾನಾಯ್ಕ ಹೇಳಿದರು.
ಅವರು ತಾಲೂಕಿನ ತಾಳೆಬಸಾಪುರ ತಾಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 2013-14ನೇ ಸಾಲಿನ ಮರಿಯಮ್ಮನಹಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಕ್ಷೇತ್ರದ ಪ್ರತಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ಹೊಂದಲಾಗಿದೆ. ಚಿಲಕನಹಟ್ಟಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿ ಕಂಡು ಬರುತ್ತಿದೆ. ಶುದ್ಧ ಕುಡಿಯುವ ನೀರನ್ನು ಒದಗಿಸಲು ಆರ್ಒ ಸಿಸ್ಟಂನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ಅತಿ ಶೀಘ್ರದಲ್ಲೇ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.
ಹೊಸಪೇಟೆ ಎಪಿಎಂಸಿ ಮಾಜಿ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿದರು. ಚಿಲಕನಹಟ್ಟಿ ಗ್ರಾಪಂ ಅಧ್ಯಕ್ಷೆ ಗಂಗೀಬಾಯಿ ರಾಮಾನಾಯ್ಕ, ಗಾಪಂ ಉಪಾಧ್ಯಕ್ಷೆ ದೀಪ್ಲಿಬಾಯಿ, ಜಿಪಂ ಸದಸ್ಯೆ ತಿಪ್ಪಿಬಾಯಿ ಠಾಕ್ರನಾಯ್ಕ್, ತಾಪಂ ಸದಸ್ಯೆ ಆನಂದಮ್ಮ ಮಾರ್ಗದಪ್ಪ, ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ನಾಯ್ಕ್, ಗಾಪಂ ಸದಸ್ಯರಾದ ಪೂರ್ಯನಾಯ್ಕ್, ಸಾಮ್ಯನಾಯ್ಕ್, ಸೋಮ್ಲಾನಾಯ್ಕ್, ಬಿ. ಸಂತೋಷ್, ತಾಲೂಕು ಕ್ರೀಡಾ ಪರಿವೀಕ್ಷಕ ಬಸವರಾಜ ಜತ್ತಿ, ಶಿಕ್ಷಣ ಸಂಯೋಜಕ ಬಸವರಾಜ, ಶಿಕ್ಷಕರ ಸಂಘದ ಅಧ್ಯಕ್ಷ ಮಾರ್ಗದಪ್ಪ, ಸಿಆರ್ಪಿ ಕೆ. ನಾಗೇಶ್, ಮುಖ್ಯಶಿಕ್ಷಕರಾದ ಎಲ್.ಟಿ. ನಾಯ್ಕ್, ಜಿಲ್ಲಾ ದೈ.ಶಿ.ಸಂ. ಅಧ್ಯಕ್ಷ ಕೆ. ಮಂಜುನಾಥ, ಸೋಮು ಸೇರಿದಂತೆ ಇತರರು ಇದ್ದರು.