ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕ್ರೀಡೆಗಳಿಗೆ ಸಮಾನ ಅವಕಾಶ ನೀಡಬೇಕು: ಮಮತಾ

Mainashree
Updated On : 18 Aug 2013, 12:04 pm

ಹಗರಿಬೊಮ್ಮನಹಳ್ಳಿ: ಮಕ್ಕಳ ಬೌದ್ಧಿಕ ಮತ್ತು ಶರೀರಿಕ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳು ಅಗತ್ಯವಾಗಿ ಬೇಕು. ಮಕ್ಕಳು ಬರಿ ಡಾಕ್ಟರ್ ಆಗಬೇಕೆಂದು ಓದಿಸುವ ಪದ್ಧತಿಗೆ ಬದಲಾಗಿ ಸಮರ್ಥ ನಾಯಕತ್ವ ನೀಡಬಲ್ಲ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆಗಳು ಪಠ್ಯ ಪುಸ್ತಕದಂತೆ ಸಮಾನವಾಗಿ ಮಕ್ಕಳಿಗೆ ಸಿಗಬೇಕು ಎಂದು ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ ತಿಳಿಸಿದರು.
ತಾಲೂಕಿನ ಬಾಚಿಗೊಂಡನಹಳ್ಳಿಯಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ  ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ಮುಂದಿನ ಪ್ರಜೆಗಳಾಗಿ ಈ ದೇಶದ ಬಹುದೊಡ್ಡ ಆಸ್ತಿಯಾಗಬೇಕು. ಅವರಿಗೆ ಬೇಕಾದ ಶೈಕ್ಷಣಿಕ, ಆರ್‌ಙಕ ಮತ್ತು ಕ್ರೀಡಾ ತರಬೇತಿ ಸಹಾಯ ಸಹಕಾರ ನೀಡಬೇಕಾದದ್ದು ಎಲ್ಲರ ಕರ್ತವ್ಯ. ಮಕ್ಕಳ ಲಾಲನೆ ಪಾಲನೆ ಮಾಡಿದರೆ ಸಲಾದು, ಅದರ ಬೆಳವಣಿಗೆಗೆ ಬೇಕಾದ ಕ್ರೀಡಾ ಸಂಸ್ಕೃತಿಕ ಪರಿಸರವನ್ನು ನಿರ್ಮಿಸುವ ಕಾರ್ಯ ಮಾಡದೆ ಮಗು ಉತ್ತಮ ಪ್ರಜೆಯಾಗಿ ಬೆಳೆಯಲಾರದು ಎಂದರು.
ತಾಪಂ ಸದಸ್ಯೆ ಲಕ್ಷ್ಮಮ್ಮ ಹುಲುಗಪ್ಪ ಕ್ರೀಡಾ ದ್ವಜಾರೋಹಣ ನೆರವೇರಿಸಿದರು, ದೈಹಿಕ ಶಿಕ್ಷಕ ಜಿ. ಮಲ್ಲಿಕಾರ್ಜುನ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಎಚ್.ಎಂ. ಕೊಟ್ರಬಸಯ್ಯ, ಕೆ.ಈಶ್ವರಗೌಡ, ಕೆ. ರೋಹಿತ್, ಎಚ್. ಮಹಾಬಲೇಶ್ವರ, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಗ್ರಾಪಂ ಸದಸ್ಯರು, ಸಿಆರ್‌ಪಿ ಹುಸೇನ್‌ಸಾಬ್ ಭಾಗವಹಿಸಿದರು. ದೈಹಿಕ ಪರಿವೀಕ್ಷಕ ಕೆ.ವಿ.ಎಂ. ನಾಗಭೂಷಣ ಪ್ರಾಸ್ತಾವಿಕ ಮಾತನಾಡಿದರು, ಶೈಲಾಜಾ ಆಡೂರಶೆಟ್ಟರ ನಿರೂಸಿದರು. ಮುಖ್ಯೋಪಾಧ್ಯಯ ಯು. ಹಾಲಪ್ಪ ವಂದಿಸಿದರು. ವಿವಿಧ ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement