ಬಳ್ಳಾರಿ: ಬಿಜೆಪಿ ಮಹಿಳಾ ಮೋರ್ಚಾಕ್ಕೆ ನೇಮಕ
ಬಳ್ಳಾರಿ: ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಮಹಿಳಾ ಮೋರ್ಚಾದ ಅಧ್ಯಕ್ಷೆಯನ್ನಾಗಿ ಸುಮಾ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೆ. ನೇಮಿರಾಜ್ ನಾಯ್ಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಯಿತು. ನಗರ ಘಟಕದ ಅಧ್ಯಕ್ಷರಾಗಿ ಶರಣಮ್ಮ ಆಯ್ಕೆಯಾದರು. ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ರಾಮಲಿಂಗಪ್ಪ, ವಿರೂಪಾಕ್ಷಗೌಡ, ಅನಂತಸ್ವಾಮಿ, ಹನುಮಂತಪ್ಪ, ರಾಮಚಂದ್ರಯ್ಯ, ಮಂಜಮ್ಮ ಮಲ್ಲೇಶ್ ಇದ್ದರು.