ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಜೆಪಿಗೆ ಆಯ್ಕೆ

Lingaraj Badiger
Updated On : 19 Aug 2013, 11:47 am

ಬಳ್ಳಾರಿ: ಬಿಜೆಪಿ ಬಳ್ಳಾರಿ ನಗರ ಘಟಕದ ಯುವಮೋರ್ಚಾ ಅಧ್ಯಕ್ಷರನ್ನಾಗಿ ಕರೂರು ಎಸ್. ಸುಧಾಕರ್ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್. ರಾಘವೇಂದ್ರ ಅವರನ್ನು ಆಯ್ಕೆ ಮಾಡಲಾಯಿತು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೆ. ನೇಮಿರಾಜ ನಾಯ್ಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಳ್ಳಾರಿ ನಗರ ಬಿಜೆಪಿ ಘಟಕಾಧ್ಯಕ್ಷರನ್ನಾಗಿ ಕೆ.ಎ. ವೇಮಣ್ಣ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಪೆಂಡೆಕಲ್ಲು ಸುರೇಶ್, ಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು. ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಹಿರಿಯ ಮುಖಂಡ ರಾಮಲಿಂಗಪ್ಪ, ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಗೌಡ, ಅನಂತಸ್ವಾಮಿ, ಹನುಮಂತಪ್ಪ, ರಾಮಚಂದ್ರಯ್ಯ ಹಾಗೂ ಮಂಜಮ್ಮ ಮಲ್ಲೇಶ್ ಇದ್ದರು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋನಾಳ ಮುರಾರಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಅರಸು ಜನ್ಮದಿನ
ಹಗರಿಬೊಮ್ಮನಹಳ್ಳಿ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 98ನೇ ಜನ್ಮದಿನವನ್ನು ಆ. 20ರಂದು ಬೆಳಗ್ಗೆ 9ಕ್ಕೆ ಇಲ್ಲಿನ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಎಜಾಜ್‌ಬೇಗ್ ತಿಳಿಸಿದ್ದಾರೆ. ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ ಅಧ್ಯಕ್ಷತೆಯಲ್ಲಿ ಕ್ಷೇತ್ರದ ಶಾಸಕ ಎಸ್. ಭೀಮಾನಾಯ್ಕ ಜನ್ಮದಿನಾಚರಣೆ ಉದ್ಘಾಟಿಸಲಿದ್ದಾರೆ. ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ನಾಗರತ್ನಾ ವೆಂಕಟೇಶ್, ಕರಿಬಸವನಗೌಡ್ರ ರತ್ನಮ್ಮ, ಹೇಮ್ಲವ್ವ ಕೃಷ್ಣನಾಯ್ಕ, ರೋಗಾಣಿ ಹುಲುಗಪ್ಪ, ಉಪ್ಪಾರ ಬಾಲಪ್ಪ, ಪವಾಡಿ ಗಂಗಮ್ಮ, ನಾಯಕರ ಗೌರಮ್ಮ, ಬಡಲಡಿಕಿ ಮಂಜುಳಾ, ತಾಪಂ ಇಒ ಜಿ. ಗೋಪ್ಯಾನಾಯ್ಕ, ಎಂ. ಜ್ಞಾನೇಶ್ವರಯ್ಯ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್. ವೀರಮ್ಮ ನಿಧನ
ಬಳ್ಳಾರಿ: ಸಿರುಗುಪ್ಪ ತಾಲೂಕು ದರೂರು ಗ್ರಾಮದ ಎಸ್. ವೀರಮ್ಮ (66) ಭಾನುವಾರ ಸಂಜೆ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಮೂವರು ಪುತ್ರಿಯರು  ಇದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement