ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸೇವೆ ನೀಡದ ಸಮುದಾಯ ಆರೋಗ್ಯ ಕೇಂದ್ರ: ಆರೋಪ

Lingaraj Badiger
Updated On : 19 Aug 2013, 11:54 am

ಕುರುಗೋಡು: ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿ 8 ವರ್ಷಗಳಾದರು, ಜನರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾಗಿದೆ ಎಂದು ಸಿಪಿಐ ತಾಲೂಕು ಘಟಕದ ಮುಖಂಡ ಕೆ. ಗಾದಲಿಂಗಪ್ಪ ದೂರಿದರು.
ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿ, ಆಸ್ಪತ್ರೆ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಗ್ರಾಮದ 45 ಸಾವಿರದಷ್ಟು ಜನಸಂಖ್ಯೆ ಇದ್ದು, ಆರೋಗ್ಯ ರಕ್ಷಣೆಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಅವಲಂಬಿಸಿದ್ದಾರೆ. ಹಗಲು ಮತ್ತು ರಾತ್ರಿ ಚಿಕಿತ್ಸೆಗಾಗಿ ಬಂದ ಜನರಿಗೆ ಸಮರ್ಪಕ ಚಿಕಿತ್ಸೆ ಸಿಗದೆ ಪರದಾಡಿದ್ದಾರೆ. ಇದಕ್ಕೆ ಔಷಧಿ, ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಕಾರಣವಾಗಿದೆ ಎಂದರು.
ಈ ಬಗ್ಗೆ ಹಲವು ಬಾರಿ, ಆಸ್ಪತ್ರೆ ಆಡಳಿತ, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಕ್ಷೇತ್ರ ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಈ ಬಗ್ಗೆ ಶಾಸಕರು ಕನಿಷ್ಟ ಕಾಳಜಿ ತೋರದಿರುವುದು ವಿಷಾದದ ಸಂಗತಿ. ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಗಮನ ನೀಡಿ ಆಸ್ಪತ್ರೆಯಲ್ಲಿನ ಸಿಬ್ಬಂದಿ, ವೈದ್ಯ, ಔಷಧಿ ಕೊರತೆ ನೀಗಿಸಿ ಹೆಚ್ಚಿನ ಸೌಲಭ್ಯ ನೀಡಲು ಮುಂದಾಗಬೇಕು. ಉದಾಸೀನ ತೋರಿದಲ್ಲಿ ಸಂಘ ಸಂಸ್ಥೆಗಳ ಸಭೆ ಕರೆದು ಮುಂದಿನ ವಾರ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಿ.ಎಸ್. ಶಿವಶಂಕರ್, ಎಚ್.ಎಂ. ವಿಶ್ವನಾಥಸ್ವಾಮಿ, ಎಸ್.ಪಿ. ಮಹ್ಮದ್‌ಖಾನ್, ಮಾರೆಪ್ಪ, ಕೊರ್ಲಗುಂದಿ ಮಲ್ಲಯ್ಯ, ಗಾಳಿ ಬಸವರಾಜ್, ಅನ್ನಪೂರ್ಣ, ವಜನಾ ಸೇರಿದಂತೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement