ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಂಡನಾಯಕನಹಳ್ಳಿ: ಬಸ್ ನಿಲುಗಡೆಗೆ ಆಗ್ರಹ

Mainashree
Updated On : 20 Aug 2013, 11:22 am

ಹೊಸಪೇಟೆ: ತಾಲೂಕಿನ ಕೊಂಡನಾಯಕನಹಳ್ಳಿ ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ಇಲ್ಲಿನ ಸ್ಲಂ ಜನರ ವೇದಿಕೆ ಹಾಗೂ ವಿಕಲಚೇತನರ ಸಂಘದ ಪದಾಧಿಕಾರಿಗಳು ಸೋಮವಾರ ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.ಕೊಂಡನಾಯಕನಹಳ್ಳಿ ಸ್ಲಂ ಪ್ರದೇಶದಲ್ಲಿ ಸುಮಾರು 40-50 ವಿದ್ಯಾರ್ಥಿಗಳು ಹೊಸಪೇಟೆಯ ವಿವಿಧ ಕಾಲೇಜುಗಳಲ್ಲಿ ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲ ಕಾಲೇಜುಗಳ ತರಗತಿಗಳು ಬೆಳಗ್ಗೆ 7.30ಕ್ಕೆ ಆರಂಭವಾಗುತ್ತಿದ್ದು, ಈ ವಿದ್ಯಾರ್ಥಿಗಳು ಬೆಳಗ್ಗೆ 6.30ರಿಂದ ಬಸ್‌ಗಳಿಗಾಗಿ ಕಾಯುತ್ತಿದ್ದು, ಹೊಸಪೇಟೆಯಿಂದ ಕಮಲಾಪುರದ ಮೂಲಕ ಹೋಗುವ ಎಲ್ಲ ಬಸ್‌ಗಳು ಮತ್ತು ನಗರ ಸಾರಿಗೆ ಬಸ್‌ಗಳು ಕೊಂಡನಾಯಕನಹಳ್ಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಬೇಕು. ವಿದ್ಯಾರ್ಥಿಗಳ ಸಮಸ್ಯೆ ಅರ್ಥಮಾಡಿಕೊಂಡು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ಗಳನ್ನು ನಿಲ್ಲಿಸಬೇಕು. ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ, ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸ್ಥಳೀಯ ಮುಖಂಡರಾದ ಕೆ.ಜಿ. ವೆಂಕಟೇಶ್, ಎಚ್. ಶೇಷು, ವಿಜಯ್, ಶ್ಯಾಮ್, ಶೇಕ್ಷಾವಲಿ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement