ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದರೋಜಿ ಕೆರೆಯಿಂದ ನೀರು ಪೂರೈಸುವ ಕುರಿತು ರೈತರ ಸಭೆ

Mainashree
Updated On : 20 Aug 2013, 11:21 am

ಕಂಪ್ಲಿ: ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಿಂದ ಕುಡಿಯುವ ನೀರು ಯೋಜನೆಗೆ ದರೋಜಿ ಕೆರೆಯಿಂದ ನೀರು ಪೂರೈಸುವ ಕುರಿತು ಇಲ್ಲಿಗೆ ಸಮೀಪದ ದರೋಜಿ ಪ್ರವಾಸಿ ಮಂದಿರದ ಆವರಣದಲ್ಲಿ ರೈತರ ಸಭೆ ನಡೆಸಲಾಯಿತು.
ಸಂಡೂರು ಜಿಪಂ ಇಇ ಎಸ್.ಎಂ. ಬಸವರಾಜ ಮಾತನಾಡಿ, ದರೋಜಿ ಕೆರೆಯಿಂದ ನೀರು ಪಡೆದು ಹಳೆ ದರೋಜಿ, ಹೊಸ ದರೋಜಿ ಹಾಗೂ ಮಾದಾಪುರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ರೈತರು ಸಮ್ಮತಿ ನೀಡಬೇಕು ಎಂದು ರೈತರಲ್ಲಿ ಮನವಿ ಮಾಡಿದರು.   
ಈ ಕುರಿತಂತೆ ರೈತರು ಪ್ರತಿಕ್ರಿಯಿಸಿ ಮಾತನಾಡಿ, ದರೋಜಿ ಕೆರೆಯಿಂದ ಕುಡಿಯುವ ನೀರಿನ ಯೋಜನೆಗೆ ನೀರು ಕೊಟ್ಟರೆ ರೈತರ ಕೃಷಿ ಭೂಮಿಗಳಿಗೆ ನೀರಿನ ತೀವ್ರ ಅಡಚಣೆಯಾಗುತ್ತದೆ. ದರೋಜಿ ಕೆರೆಯಲ್ಲಿ ಹೂಳು ತುಂಬಿದ್ದು, ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ರೈತರು ಹೂಲ ಗದ್ದೆಗಳಿಗೆ ಸಮರ್ಪಕವಾಗಿ ನೀರು ಹಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆರೆ ಹೂಳು ತೆಗೆಸಿ, ಎಸ್ಕೇಪ್ ಗೇಟ್ ಅಳವಡಿಸಿ, ಕೆರೆಯನ್ನು ಅಭಿವೃದ್ಧಿಪಡಿಸಿದರೆ ಮಾತ್ರ ಹೆಚ್ಚಿನ ನೀರಿನ ಸಂಗ್ರಹಣೆಗೆ ಸಾಧ್ಯವಾಗುತ್ತದೆ. ಇದರಿಂದ ಕೃಷಿಗೆ ಅನುಕೂಲವಾಗುತ್ತದೆ. ಸರ್ಕಾರ ಕೆರೆಯನ್ನು ಅಭಿವೃದ್ದಿಪಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಜಿಪಂ ಜೆಇ ಕೆ.ವಿ. ಹೇಮಾದ್ರಿ, ಗ್ರಾಪಂ ಅಧ್ಯಕ್ಷ ವಿ. ನಾರಾಯಣಪ್ಪ, ಗ್ರಾಪಂ ಸದಸ್ಯರು, ಕೆರೆ ನೀರು ಬಳಕೆದಾರರ ಸಹಕಾರ ಸಂಘ ಭಾಗ.1 ಮತ್ತು ಭಾಗ.2 ಪದಾಧಿಕಾರಿಗಳು, ರೈತ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement