ಶಿಕ್ಷಣಕ್ಕೆ ಪೋಷಕರ ಆಸಕ್ತಿ ಮುಖ್ಯ: ಮಂಜುನಾಥ
ಕೂಡ್ಲಿಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಶಿಕ್ಷಣಕ್ಕೆ ಪೋಷಕರ ಆಸಕ್ತಿ ಮುಖ್ಯವಾಗುತ್ತದೆ ಎಂದು ಪಾಲಯ್ಯನಕೋಟೆ ಮಂಜುನಾಥ ತಿಳಿಸಿದರು.
ಅವರು ತಾಲೂಕಿನ ಹುಡೇಂ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಮಕ್ಕಳಿಗೆ ತಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಪಡೆದ ಪ್ರತಿಯೊಬ್ಬರೂ ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪವುದಕ್ಕೆ ಅನೇಕ ಅವಕಾಶಗಳಿವೆ. ಇದರಿಂದ ಕೇವಲ ಸರ್ಕಾರಿ ಉದ್ಯೋಗವಲ್ಲದೆ, ಖಾಸಗಿ ಜೀವನದ ಏಳ್ಗೆಗೆ ದಾರಿಯಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಸಿ. ತಿಪ್ಪಣ್ಣ ಮಾತನಾಡಿ, ಶಾಲೆಯಲ್ಲಿ ಉತ್ತಮ ಪರಿಸರ ಮೂಡಿಸುವ ಉದ್ದೇಶದಿಂದ ಸಸಿಗಳನ್ನು ನೆಡಲಾಗುವುದು. ದಾನಿಗಳಾದ ಪಿ. ವೀರಣ್ಣ ಮತ್ತು ಮಕ್ಕಳು ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ತಟ್ಟೆ, ಲೋಟಗಳನ್ನು ವಿತರಿಸಿದ್ದಾರೆ. ಕೋಣನ ವಂಶಸ್ಥರು ಶಾಲಾ ಆವರಣದಲ್ಲಿದ್ದ ಜಾಗ ನೀಡಿದ್ದಾರೆ. ಅಲ್ಲದೆ, ಅನೇಕ ಉತ್ಸಾಹಿ ಹಳೇ ವಿದ್ಯಾರ್ಥಿಗಳು ಸಹ ಓದಿದ ಶಾಲೆಯ ಋಣ ತೀರಿಸಲು ಸಹಾಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಬಿ.ಜಿ. ಮಂಜಣ್ಣ, ಸದಸ್ಯರಾದ ಓಬಣ್ಣ, ಪಾರ್ವತಮ್ಮ, ಜಿ. ಪಾಪಣ್ಣ, ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರಪ್ಪ, ಶಿಕ್ಷಕರಾದ ಅನ್ನಪೂರ್ಣಮ್ಮ, ನರಸಿಂಹರೆಡ್ಡಿ, ಕಾಮಯ್ಯ, ಸುರೇಶ್, ಮಂಜುಳಮ್ಮ, ಎಸ್. ಶಾಂತಕುಮಾರಿ, ಮುಖ್ಯಶಿಕ್ಷಕ ಬಿ.ಎಸ್. ಕರಿಬಸಪ್ಪ, ಪಿ. ವೀರಣ್ಣ, ಗುಡ್ಡದ ಬೋರಯ್ಯ, ಕೋಣನ ಪ್ರಭು, ಎಂ.ಎಸ್. ನಾಗರಾಜ, ತಮ್ಮಣ್ಣರ ಕೃಷ್ಣಮೂರ್ತಿ ಇದ್ದರು.