ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಮಿನಿ ಉದ್ಯೋಗ ಮೇಳ

Lingaraj Badiger
Updated On : 22 Aug 2013, 11:18 am

ಬಳ್ಳಾರಿ: ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಆ. 22ರಂದು ಬೆಳಗ್ಗೆ 10ರಿಂದ 2 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟೆಪ್ಪ ತಿಳಿಸಿದ್ದಾರೆ. ಈ ಮೇಳದಲ್ಲಿ ನವಭಾರತ್ ಫರ್ಟಿಲೈಜರ್ಸ್, ಕಾರ್ಶಕ್ ಬಯೋ ಪ್ಲ್ಯಾನ್‌ಟೆಕ್, ಅಶೋಕ್ ಲೇಲ್ಯಾಂಡ್, ಬಳ್ಳಾರಿ ಮೋಟಾರ್ಸ್, ಎಲ್‌ಐಸಿ ಮತ್ತಿತರ ಉದ್ಯೋಗದಾತರು ಪಾಲ್ಗೊಂಡು ಉದ್ಯೋಗವಕಾಶ ನೀಡಲಿದ್ದಾರೆ. ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ, ಯಾವುದೇ ಪದವಿ, ಐಟಿಐ ಡೀಜೆಲ್ ಮೆಕ್ಯಾನಿಕ್, ಮೋಟಾರ್ ಮೆಕ್ಯಾನಿಕ್, ಆಟೋಮೊಬೈಲ್ಸ್‌ನಲ್ಲಿ ಡಿಪ್ಲೋಮಾದೊಂದಿಗೆ 5 ವರ್ಷಗಳ ಅನುಭವ ಹೊಂದಿರಬೇಕು. ಆಸಕ್ತರು ತಮ್ಮ ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ಸ್ವವಿವರ(ರಿಸ್ಯೂಂ)ದೊಂದಿಗೆ ಮೇಳದಲ್ಲಿ ಭಾಗವಹಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement