ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಂಡೆರಂಗನಾಥ ಕ್ಷೇತ್ರಪ್ರವಾಸಿ ತಾಣವಾಗಿಸುವೆ

Lingaraj Badiger
Updated On : 22 Aug 2013, 11:28 am

ಹಗರಿಬೊಮ್ಮನಹಳ್ಳಿ: ಉತ್ತಮ ರಸ್ತೆ, ಯಾತ್ರಿ ನಿವಾಸ, ಕುಡಿಯುವ ನೀರು, ಉದ್ಯಾನವನ, ಸಾರಿಗೆ, ಶೌಚಾಲಯ, ಬಸ್ ತಂಗುದಾಣ ಸೇರಿದಂತೆ ಪ್ರವಾಸಿ ತಾಣಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನಾಡಿನ ಐತಿಹಾಸಿಕ ಬಂಡೆರಂಗನಾಥ ಸ್ವಾಮಿ ಕ್ಷೇತ್ರವನ್ನು ಪ್ರಮುಖ ಪ್ರವಾಸಿತಾಣವಾನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಸ್. ಭೀಮಾನಾಯ್ಕ ಭರವಸೆ ನೀಡಿದರು. ತಾಲೂಕಿನ ತಂಬ್ರಹಳ್ಳಿ ಗ್ರಾಮದ ಬಳಿಯ ಐತಿಹಾಸಿಕ ಶ್ರೀ ಬಂಡೆರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ಪ್ರವಾಸೋದ್ಯಮ ಇಲಾಖೆಯ ರು. 80 ಲಕ್ಷ ಅನುದಾನದಲ್ಲಿ ಕೈಗೊಂಡ ಉದ್ಯಾನವನ, ಶೌಚಾಲಯ, ನೀರಿನ ಟ್ಯಾಂಕ್, ಸ್ನಾನಗೃಹ, ಬಸ್ ತಂಗುದಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ತಾಪಂ ಸದಸ್ಯರಾದ ಉಪ್ಪಾರ ಬಾಲಪ್ಪ, ಭಾರತಮ್ಮ ಬೆಲ್ಲದ್, ತಂಬ್ರಹಳ್ಳಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪಟ್ಟಣಶೆಟ್ಟಿ ಸುರೇಶ್, ಜೆಡಿಎಸ್ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಬನ್ನಿಗೋಳ ವೆಂಕಣ್ಣ, ಸ್ಥಳೀಯ ಮುಖಂಡರಾದ ಬಣಕಾರ ಕೊಟ್ರೇಶ್, ಗೌರಜ್ಜನವರ ಮಲ್ಲಿಕಾರ್ಜುನ, ಎಚ್.ಬಿ. ಗಂಗಾಧರಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಳ್ಳಾರಿ: ನಾಳೆ ಖೋಖೋ ಪಂದ್ಯಾವಳಿಗೆ ಚಾಲನೆ
ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ ಸ್ವತಂತ್ರ ಪದವಿಪೂರ್ವ ಕಾಲೇಜು ಆವರಣದಲ್ಲಿ ಆ. 23ರಂದು ಶುಕ್ರವಾರ ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಆ. 23ರಂದು ಬೆಳಗ್ಗೆ 9.30ಕ್ಕೆ ನಡೆಯಲಿರುವ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕಾಲೇಜು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರ ಘಟಕಕ್ಕೆ ನೇಮಕ
ಬಳ್ಳಾರಿ: ಅಖಿಲ ಭಾರತ ಹಜರತ್ ಟಿಪ್ಪುಸುಲ್ತಾನ್ ಫೆಡರೇಷನ್ ಬಳ್ಳಾರಿ ನಗರ ಘಟಕದ ಅಧ್ಯಕ್ಷರಾಗಿ ಖಾಜಾ ಮೀರಾನ್ ನೇಮಕವಾಗಿದ್ದಾರೆ. ಫೆಡರೇಷನ್ ಜಿಲ್ಲಾಧ್ಯಕ್ಷ ಸಮೀರ ಸೇಠ ಖಾಜಾ ಮೀರಾನ್ ಅವರನ್ನು ನೇಮಕ ಮಾಡಿದ್ದಾರೆ ಎಂದು ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ನಜೀರಪಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವಕರ್ನಾಟಕ ನಿರ್ಮಾಣ ವೇದಿಕೆಗೆ ಬಾಲಕೃಷ್ಣ ನೇಮಕ
ಬಳ್ಳಾರಿ: ನವಕರ್ನಾಟಕ ನಿರ್ಮಾಣ ವೇದಿಕೆ (ಕನ್ನಡಪರ ಸಂಘಟನೆ ಒಕ್ಕೂಟ) ಬಳ್ಳಾರಿ ನಗರ ಉಪಾಧ್ಯಕ್ಷರನ್ನಾಗಿ ಬಿ. ಬಾಲಕೃಷ್ಣ ಅವರನ್ನು ನೇಮಿಸಿದೆ. ಈ ಕುರಿತು ವೇದಿಕೆಯ ಜಿಲ್ಲಾಧ್ಯಕ್ಷ ಪಿ. ಶೇಖರ್ ನೇಮಕದ ಆದೇಶ ಹೊರಡಿಸಿದ್ದು, ವೇದಿಕೆಯ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಸಂಘಟನೆ ಬಲಪಡಿಸಲು ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement