ರಾಘವೇಂದ್ರಸ್ವಾಮಿಗಳ ಪೂರ್ವಾರಾಧನೆ ಕಾರ್ಯಕ್ರಮ
ಸಿರುಗುಪ್ಪ: ಗುರು ರಾಘವೇಂದ್ರಸ್ವಾಮಿಗಳ 342ನೇ ಆರಾಧನಾ ಮಹೋತ್ಸವದ ನಿಮಿತ್ತ ಪಟ್ಟಣದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಜರುಗಿದ ಪೂರ್ವಾರಾಧನೆಯಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ಅನಂತರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಕೆಂಚನಗುಡ್ಡ ರಾಯರ ಮಠದ ಅರಳಿಕಟ್ಟೆ ಯಂಕಣ್ಣಾಚಾರ್ ಅವರಿಂದ ರಾಯರ ಜೀವನ ಚರಿತ್ರೆಯ ಉಪನ್ಯಾಸ ನಡೆಯಿತು. ಇದೇ ಸಂದರ್ಭದಲ್ಲಿ ಪರಿಮಳ ಮತ್ತು ಅಭಯಾಂಜನೇಯಸ್ವಾಮಿ ಭಜನಾ ಮಂಡಳಿಯವರಿಂದ ರಾಯರ ಭಕ್ತಿಗೀತೆಗಳ ಭಜನೆ ಹಾಗೂ ಕುಮಾರಿ ಅನುಷಾ, ಅರ್ಪಿತಾ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಜಿ. ಸಿದ್ದಾರೆಡ್ಡಿ, ವಿಪ್ರ ಸಮಾಜದ ಮುಖಂಡರಾದ ಕೆ. ಭುಜಂಗರಾವ್, ವೈ. ಗೋಪಾಲರಾವ್, ಜೆ. ರಾಮರಾವ್, ಎಚ್.ಕೆ. ಗೋಪಾಲರಾವ್, ಎಚ್. ವಸುದೇಂದ್ರ, ಎನ್.ಪ್ರಹ್ಲಾದರಾವ್, ಮುರಳೀಧರ, ಪ್ರಸನ್ನ, ರಾಘವೇಂದ್ರರಾವ್, ಗುರುಪ್ರಸಾದ, ಜೆ. ಶ್ರೀನಿವಾಸಾಚಾರ್, ಜೆ. ಶ್ಯಾಮಾಚಾರ್, ಜೆ. ರವಿ ಹಾಗೂ ಇತರರು ಪಾಲ್ಗೊಂಡಿದ್ದರು.