ಬಳ್ಳಾರಿ: ಕರವೇ ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬೆಂಗಳೂರಿನಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಎಂ. ಬಸವರಾಜಸ್ವಾಮಿ ಸೂಚನೆ ಮೇರೆಗೆ ಕರವೇ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಉಪಾಧ್ಯಕ್ಷರಾಗಿ ಕೆ.ಎಂ. ಶಿವಕುಮಾರ್, ಕಿಶೋರ್, ಕೋಳೂರು ತಿಪ್ಪಾರೆಡ್ಡಿ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾಗಿ ಕೆ.ಬಿ. ಹುಸೇನ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ಕೆ.ಬಿ. ಈಶ್ವರ್, ನಗರ ಘಟಕದ ಮಹಿಳಾ ಅಧ್ಯಕ್ಷೆಯಾಗಿ ಭಾಗ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಹುಬ್ಬಳ್ಳಿ ರಾಜು, ಗಂಗಾಧರ ತಾಳೂರು, ಅಮರೇಶ್ ಹಚ್ಚೊಳ್ಳಿ, ಮಹೇಶ್ ಬಣಕಾರ್, ದೇವರಾಜ, ಈಶ್ವರ್‌ರಾವ್, ರುದ್ರಮುನಿಸ್ವಾಮಿ, ಪಂಪಾಪತಿ, ದೊಡ್ಡಬಸಪ್ಪ, ಬಿ. ಕೃಷ್ಣ, ಕೆ. ಪರಶುರಾಮ, ಚಂದ್ರಮೌಳಿ, ಎಸ್. ರವಿಕುಮಾರ್, ನಾಗಭೂಷಣ್, ಮಂಜುನಾಥ, ಶ್ರೀನಿವಾಸ, ಕುಮಾರಸ್ವಾಮಿ ಹಾಗೂ ಕಾನೂನು ಸಲಹೆಗಾರರಾಗಿ ಎಂ. ಮೃತ್ಯುಂಜಯಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣ ಈರಪ್ಪ, ಸಂಘಟನಾ ಕಾರ್ಯದರ್ಶಿ ಗುಜ್ಜಲ್ ನಾಗರಾಜ, ಚಾನಾಳ್ ಶೇಖರ್, ನಗರಾಧ್ಯಕ್ಷ ಜಗನ್ನಾಥ, ಸಿರುಗುಪ್ಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಜೆ. ಭಾಗ್ಯ, ಸುಮಾರೆಡ್ಡಿ, ಕೆ. ಆದಿಲಕ್ಷ್ಮಿ, ಅನಿತಾ, ಸಿದ್ದಲಿಂಗಮ್ಮ, ವಿಜಯಕುಮಾರಿ ಸೇರಿದಂತೆ ಇತರರು ಇದ್ದರು ಎಂದು ಕರವೇ ಜಿಲ್ಲಾಧ್ಯಕ್ಷ ಜೆ.ಎಂ. ಬಸವರಾಜಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.