ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದ್ಯಾರ್ಥಿ ಕೊಲೆ: ಆರೋಪಿ ಬಂಧನ

Lingaraj Badiger
Updated On : 27 Aug 2013, 11:43 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 26
ನಗರದ ಅಮರಾವತಿಯಲ್ಲಿ ಆ. 16ರಂದು ಬಿಬಿಎಂ ಅಂತಿಮ ವರ್ಷದ ವಿದ್ಯಾರ್ಥಿ ನಾಗರಾಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಧಾರವಾಡ ಜಿಲ್ಲೆಯ ಕುಂದುಗೋಳ ತಾಲೂಕಿನ ಕಳಸ ಗ್ರಾಮದ ನಿವಾಸಿ ಬಸವರಾಜ್ (20) ಬಂಧನಕ್ಕೆ ಒಳಗಾಗಿರುವ ವ್ಯಕ್ತಿ. ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ನಾಗರಾಜ ಕೂಡ ಪ್ರೀತಿಸುತ್ತಿದ್ದರಿಂದ ಕೊಲೆ ಮಾಡಿದ್ದಾನೆ.
ಹೇಗಾದರೂ ಮಾಡಿ ನಾಗರಾಜನನ್ನು ಮುಗಿಸಬೇಕೆಂದು ತೀರ್ಮಾನಿಸಿದ್ದ ಬಸವರಾಜ. ಆ. 15ರಂದು ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದು ಸ್ನೇಹಿತ ನಾಗರಾಜ ಜತೆ ಆತನ ರೂಮ್‌ನಲ್ಲಿಯೇ ಮಲಗಿದ್ದ. ಮರುದಿನ ಬೆಳಗ್ಗೆ 9.30ರ ಸುಮಾರಿಗೆ ನಾಗರಾಜ ಮಲಗಿದ್ದಾಗ, ಆರೋಪಿ ಬಸವರಾಜ ರೂಮ್ ಹೊರಗಡೆ ಇದ್ದ ಕಲ್ಲು ತಂದು ನಾಗರಾಜನ ತಲೆಗೆ ಹೊಡೆದು ಸಾಯಿಸಿದ್ದಾನೆ. ಶವದ ಬಳಿ ನನ್ನ ಸಾವಿಗೆ ಪ್ರೀತಿಸಿದ ಹುಡುಗಿ ಕಾರಣ ಅಂತಾ ಅವಳ ಮೊಬೈಲ್ ನಂಬರ್ ಬರೆದ ಪತ್ರವನ್ನಿಟ್ಟು ಹೋಗಿದ್ದ.
ಎಸ್ಪಿ ಡಾ. ಚೇತನ್ ಸಿಂಗ್ ರಾಥೋಡ್ ಹಾಗೂ ಅಡಿಷನಲ್ ಎಸ್ಪಿ ಸಿ.ಕೆ. ಬಾಬಾ ಮತ್ತು ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸಿಪಿಐ ವಿ. ರಘುಕುಮಾರ್ ನೇತೃತ್ವದಲ್ಲಿ ಎಎಸ್‌ಐಗಳಾದ ವಿ.ಡಿ. ಜೋಷಿ, ವೆಂಕಟೇಶ್, ಸಿಬ್ಬಂದಿ ಕೋದಂಡಪಾಣಿ, ಮಂಜುನಾಥ, ಸುರೇಶ್, ಫಣಿರಾಜ್, ಎ. ಸುರೇಶ್, ಕಾಳ್ಯಾನಾಯ್ಕ ಮತ್ತು ಬೊಮ್ಮನಗೌಡ ಇತರರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement