ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಹಿಳೆ ಕೊಲೆ: ಆರೋಪಿಗಳ ಬಂಧನ

Mainashree
Updated On : 28 Aug 2013, 11:35 am

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಆ. 27
ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಷ್ಣಹಳ್ಳಿ ಸಮೀಪದ ಸಂಗಮೇಶ್ವರ ದೇವಸ್ಥಾನ ಬಳಿ ಜು. 31ರಂದು ನಡೆದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಾಜನಹಟ್ಟಿ ಮಹಿಳೆ ಭಾಗ್ಯಮ್ಮ (25) ಕೊಲೆಯಾಗಿದ್ದರು. ಪೊಲೀಸರಿಗೆ ಮೊದಲು ಯಾವುದೇ ಸುಳಿವು ಸಿಕ್ಕಿರಲಿಲ್ಲ. ಪ್ರಕರಣದ ಬೆನ್ನು ಹತ್ತಿದ ತಾಲೂಕಿನ ಹೊಸಹಳ್ಳಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆಕೆಯ ಗಂಡ ರಾಜನಹಟ್ಟಿ ಗೊಲ್ಲರಹಟ್ಟಿಯ ನಾಗೇಂದ್ರಪ್ಪನೇ ಕೊಲೆ ಆರೋಪಿಯಾಗಿದ್ದು  ಆತನ ಸ್ನೇಹಿತ ಕೂಡ್ಲಿಗಿ ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ವೆಂಕಟೇಶ್ ಸಹ ಆಕೆಯ ಕೊಲೆಗೆ ಸಹಕಾರ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಟೇಟ್ನಲ್ಲಿ ಅಡಗಿದ್ದ: ಚಿಕ್ಕಮಗಳೂರು ಮತ್ತು ಹಾಸನ ಮಧ್ಯದಲ್ಲಿರುವ ಸೀಕನಹಳ್ಳಿ ಎಸ್ಟೇಟ್ನಲ್ಲಿ ಅಡಗಿದ್ದ ಆರೋಪಿ ನಾಗೇಂದ್ರಪ್ಪನನ್ನು ಮೊದಲು ಬಂಧಿಸಿ, ಅನಂತರ ವೆಂಕಟೇಶ್ನನ್ನು ಆತನ ಮನೆಯಲ್ಲಿ ಬಂಧಿಸಲಾಗಿದೆ. ಪತ್ನಿಗೆ ಅನೈತಿಕ ಸಂಬಂಧ ಇರುವ ಶಂಕೆಯಿಂದ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ನಾಗೇಂದ್ರಪ್ಪ ಜಗಳೂರು ತಾಲೂಕಿನ ರಾಜನಹಟ್ಟಿಯಿಂದ ತನ್ನ ಪತ್ನಿಯನ್ನು ದೊಣೆಹಳ್ಳಿ ಬೈಪಾಸ್ಗೆ ಬರಲು ಹೇಳಿ, ಅಲ್ಲಿಂದ ಪತ್ನಿಯ ಜೊತೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿಗೆ ಬಂದಿದ್ದಾರೆ. ಅಲ್ಲಿ ವೆಂಕಟೇಶ್ ಜತೆಯಾಗಿ ಮೂವರು ಸೇರಿ ಚಿಕ್ಕಜೋಗಿಹಳ್ಳಿಗೆ ಬರುವ ರಾತ್ರಿ ಕೊನೆಯ ಬಸ್ ಹತ್ತಿ ಬಿಷ್ಣಹಳ್ಳಿ ಕ್ರಾಸ್ ಬಳಿ ಇಳಿದಿದ್ದಾರೆ.
ಅಲ್ಲಿಂದ ಕಾಲ್ನಡಿಗೆಯಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದ ಗುಡ್ಡಕ್ಕೆ ಹೋಗಿದ್ದಾರೆ. ಸ್ನೇಹಿತನ ಬಳಿ ಹಣ ಕೇಳಿದ್ದೆ, ತೆಗೆದುಕೊಂಡು ಬರೋಣ ಎಂದು ಕಾರಣ ಹೇಳಿ ಗುಡ್ಡದ ಬಳಿ ಆಕೆಯನ್ನು ಕರೆದೊಯ್ದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ವಿವಸ್ತ್ರಗೊಳಿಸಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಹೊಸಹಳ್ಳಿ ಪೊಲೀಸರು ಭೇದಿಸಿದ್ದಾರೆ.
ಎಲ್ಪಿ ಚೇತನ್ಸಿಂಗ್ ರಾಥೋಡ್, ಡಿವೈಎಸ್ಪಿ ಪಿ.ಡಿ. ಗಜಕೋಶ್, ಸಿಪಿಐ ವಿಜಯಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್ಐ ಎಸ್. ಗುರುನಾಥ, ಸಿಬ್ಬಂದಿ ಅಂಜಿನಿ, ನಾಗರಾಜ, ಕೊಟ್ರೇಶ್ ಅಂಗಡಿ, ನಾರಾಯಣಪ್ಪ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement