ಹೂವಿನಹಡಗಲಿ: ಸಂಭ್ರಮದ ರಾಯರ ಆರಾಧನೋತ್ಸವ
ಹೂವಿನಹಡಗಲಿ: ಶ್ರೀ ಗುರುರಾಯರ 342ನೇ ಆರಾಧನೋತ್ಸವವು ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿತು. ಆರಾಧನೆಯ ನಿಮಿತ್ತ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಕನಕ ಮಹಾಪೂಜೆ, ನೈವೇದ್ಯ ಹಸ್ತೋದಕ ಸೇವೆ ಜರುಗಿತು.
ನೂತನ ರಥೋತ್ಸವಕ್ಕೆ ತಹಸೀಲ್ದಾರ್ ವಿಜಯಕುಮಾರ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ ಹಾಗೂ ವಾಯುಸ್ಥುತಿ ಪುನಃ ಚರಣ ಜರುಗಿತು.ಕೆ. ಭಾಗವತಾಚಾರ್, ಸೋಮಶೇಖರಚಾರ್, ದೀಪಾ ನಾಡಕರಣಿ, ಅಶ್ವಿನಿ ಗುರುರಾಯರ ಹಾಗೂ ದಾಸರ ಪದಗಳನ್ನು ಹಾಡಿದರು. ನಾಗರಹಳ್ಳಿ ವೇಣುಗೋಪಾಲಾಚಾರ್ ರಾಯರ ಕುರಿತು ಉಪನ್ಯಾಸ ನೀಡಿದರು.