ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜೀರ್ಣೋದ್ಧಾರಕ್ಕೆ ಕಾದಿರುವ ದೇವಸ್ಥಾನ

Mainashree
Updated On : 29 Aug 2013, 10:53 am

ತಾವರಗೇರಾ: ತಾವರಗೇರಿಯಿಂದ 10 ಕಿಮೀ ದೂರದ ಹಾಗಲದಾಳ ಗ್ರಾಮದಲ್ಲಿ, ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ವಿಜಯ ವಿಠ್ಠಲ ದೇವಸ್ಥಾನ ತನ್ನದೇ ಆದ ಇತಿಹಾಸದೊಂದಿಗೆ ಗಟ್ಟಿಮುಟ್ಟಾಗಿ ಎತ್ತರದಲ್ಲಿ ನಿಂತಿದೆ.
ವಿಜಯವಿಠ್ಠಲ ದೇವಸ್ಥಾನ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ಹಂಪಿಯಲ್ಲಿರುವ ದೇವರಿಲ್ಲದ ವಿಠ್ಠಲ ದೇಗುಲ. ಆದರೆ ಇಲ್ಲೊಂದು ದೇವರಿರುವ ವಿಠ್ಠಲ ದೇವಸ್ಥಾನ ಪ್ರಚಾರಕ್ಕೆ ಬರದೇ ಅಜ್ಞಾತವಾಗಿ ನಿಂತಿದೆ. ಬೂದು ಕಲ್ಲುಗಳಲ್ಲಿ ನಿರ್ಮಿಸಿರುವ ಈ ದೇವಸ್ಥಾನ ಚಿಕ್ಕದಾಗಿದ್ದು, ಇಟ್ಟಿಗೆ ಗಾರೆಗಳಿಂದ ಗೋಪುರ ಕಟ್ಟಲಾಗಿದೆ. (ಈಗ ಬಿದ್ದು ಹೋಗಿದೆ)  ಗರ್ಭಗುಡಿಯನ್ನು ಸಂಪೂರ್ಣ ಕಲ್ಲುಗಳಿಂದ ಕಟ್ಟಲಾಗಿದೆ.
ಹೊರಗೋಡೆಗೆ ಮೂಲೆಗೊಂದರಂತೆ ವರಾಹ ಸಿಂಹಗಳನ್ನು ಹೋಲುವ ಕೆತ್ತನೆ ಇದ್ದು, ಗರ್ಭಗುಡಿಯ ಬಾಗಿಲಿಗೆ ಬಿಡಿಸಿದ ಕುಸುರಿ ಕೆಲಸ ಆಕರ್ಷಣೀಯಾಗಿದೆ. ಅದರ ಕೆಳಗಡೆ ನಾಗರ ಹಾವುಗಳನ್ನು ಕೆತ್ತಿದ ಕಲ್ಲಿನ ಉಬ್ಬು ಶಿಲೆಗಳಿದ್ದು, ದೇವಸ್ಥಾನದ ಮುಂದೆ ಹುಲ್ಲು ಕಸ ಬೆಳೆದು ನಿಂತಿದ್ದು, ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement