ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಿರಾಶ್ರಿತರಿಗೆ, ವೃದ್ಧರಿಗೆ ಥೆರೆಸಾ ಮಾತೃ ಸ್ವರೂಪಿ

Mainashree
Updated On : 29 Aug 2013, 10:58 am

ಕುರುಗೋಡು: ನಿರಾಶ್ರಿತ ಹಾಗೂ ವೃದ್ಧರಿಗೆ ನಿಜವಾದ ತಾಯಿಯಾಗಿ ಮದರ್ ಥೆರೆಸಾ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ಜಗತ್ತಿಗೆ ಮಾದರಿಯಾಗಿದೆ ಎಂದು ಮಾಜಿ ಜಿಪಂ ಸದಸ್ಯ ಮರಿಸಿದ್ದನಗೌಡ ಹೇಳಿದರು.
ಇಲ್ಲಿಗೆ ಸಮೀಪದ ಎಮ್ಮಿಗನೂರು ಗ್ರಾಮದ ಬಸವೇಶ್ವರ ನಗರದಲ್ಲಿ ಪ್ರಜಾ ಪರಿವರ್ತನ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮದರ್ ಥೆರೆಸಾ ಅವರ 104ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ತ್ಯಾಗಕ್ಕೆ ಎಂದಿಗೂ ಬೆಲೆ ಇದೆ. ಇದರಲ್ಲಿ ಜಾತಿ, ಧರ್ಮ ಹಾಗೂ ಮತ ಬೇದವಿಲ್ಲ. ಇದಕ್ಕೆ ದೇಶದಲ್ಲಿ ಬೆಳೆದು ಬಂದ ದಾಸ ಹಾಗೂ ಭಕ್ತಿ ಪರಂಪರೆ ಸಾಕ್ಷಿಯಾಗಿದೆ. ಅದರಂತೆ ಮದರ್ ಥೆರೆಸಾ ನಿರಾಶ್ರಿತರ ಹಾಗೂ ವೃದ್ಧರಿಗೆ ನಿಜವಾದ ತಾಯಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ಜಗತ್ತಿಗೆ ಮಾದರಿಯಾಗಿದೆ ಎಂದರು.
ಗ್ರಾಪಂ ಆಧ್ಯಕ್ಷೆ ಮರೆಮ್ಮ ಹಂಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದಲ್ಲಿ ನಿರ್ಗತಿಕ ವೃದ್ಧರಿಗಾಗಿ ಇಲ್ಲಿನ ಯುವಕರು ಆಶ್ರಮ ನಿರ್ಮಿಸಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ವಿಷಯ. ಇವರ ಸೇವೆಗೆ ಸರ್ಕಾರ ಹೆಚ್ಚಿನ ಸಹಾಯ ಹಸ್ತ ನೀಡಬೇಕು ಎಂದರು. ಸಂಚಾಲಕ ಬಿ.ಸಿ. ಮಾರುತಿ ಆಶ್ರಮದ ಕಾರ್ಯ ಚಟುವಟಿಕೆಯ ವಾರ್ಷಿಕ ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ಫಾಸ್ಟರ್ ಡೇವಿಡ್, ಜಿಪಂ ಸದಸ್ಯ ವಿ. ಎರ್ರಿಸ್ವಾಮಿ, ಕುರುಬರ ಸಂಘದ ಅಧ್ಯಕ್ಷ ಜಡೆಪ್ಪ, ದೊಡ್ಡ ಬಸವರಾಜ್, ಗ್ರಾಮದ ಮುಖಂಡ ಶಾಮರಾಜ್, ಎ.ಕೆ. ಹನುಮಂತಪ್ಪ ಮತ್ತಿತರರು ಇದ್ದರು. ಮಾರೇಶ್, ಮೀನಾಕ್ಷಿ, ಬಸಮ್ಮ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement