ಸುದ್ದಿ ಸಂಕ್ಷೇಪ
ಇಂದು ಗೃಹ ಸಚಿವರ ಭೇಟಿ
ಬಳ್ಳಾರಿ: ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಆ. 30ರಂದು ಬೆಳಗ್ಗೆ 9ಕ್ಕೆ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, 9.30ಕ್ಕೆ ಬಳ್ಳಾರಿಯಲ್ಲಿ ಬಿಷಪ್ ಅವರನ್ನು ಭೇಟಿ ಮಾಡಲಿದ್ದಾರೆ. ಅನಂತರ 10 ಗಂಟೆಗೆ ಬಳ್ಳಾರಿಯಲ್ಲಿ ನವೋದಯ ಕಮ್ಯುನಿಟಿ ಸೆಂಟರ್ ಶಂಕುಸ್ಥಾಪನೆ ನೆರವೇರಿಸಿ 10.30ಕ್ಕೆ ಅಂಥೋನಿ ಕಮ್ಯುನಿಟಿ ಸೆಂಟರ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಮಧ್ಯಾಹ್ನ 1.15ಕ್ಕೆ ಕೊಪ್ಪಳಕ್ಕೆ ನಿರ್ಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಆನ್ಲೈನ್ ಆರ್ಜಿ ಆಹ್ವಾನ
ಬಳ್ಳಾರಿ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು 2013-14ನೇ ಸಾಲಿಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ನರ್ಸಿಂಗ್ (ಡಿಜಿಎನ್ಎಂ ಮತ್ತು ಬಿಎಸ್ಸಿ) ಕೋರ್ಸ್ಗಳಿಗೆ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಅಹ್ವಾನಿಸಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜಪ್ಪ ತಿಳಿಸಿದ್ದಾರೆ. ಅರ್ಜಿಯನ್ನು ಸೆ. 15ರೊಳಗಾಗಿ ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ ಮೂಲಕ ಸಲ್ಲಿಸಬೇಕು. ಮಾಹಿತಿಗಾಗಿ ದೂ. ಸಂ- 080-22207784, 22353756, 08392-267932, ಮೊ. ಸಂ-96633 38784, 9591028019ನ್ನು ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.
ವಿಷ ಸೇವಿಸಿ ಸಾವು
ಬಳ್ಳಾರಿ: ಮದ್ಯ ವ್ಯಸನಿಯೋರ್ವ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣ ಎದುರಗಡೆಯ ಬಾಷಾ ಕಾಂಪೌಂಡ್ನಲ್ಲಿ ನಡೆದಿದೆ. ಮೃತನನ್ನು ಲಾರಿ ಚಾಲಕ ಮಲ್ಲಿಕಾರ್ಜುನ (30) ಎಂದು ಗುರುತಿಸಲಾಗಿದೆ. ಈತನು ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಮದ್ಯವ್ಯಸನಿಯಾಗಿದ್ದ. ಮನನೊಂದು ಬುಧವಾರ ರಾತ್ರಿ ಮನೆಯಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಡ್ನಿ ವೈಫಲ್ಯ: ವ್ಯಕ್ತಿ ಆತ್ಮಹತ್ಯೆ
ಬಳ್ಳಾರಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರುಗೋಡು ಸಮೀಪದ ಗೋಪಾಲಪುರ ಕ್ಯಾಂಪಿನಲ್ಲಿ ಸಂಭಿಸಿದೆ. ರಂಗಾರೆಡ್ಡಿ (50) ಎಂಬುವವನೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಅವರು 8 ವರ್ಷಗಳಿಂದ ಕಿಡ್ನಿ ತೊಂದರೆ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಬುಧವಾರ ರಾತ್ರಿ ಜಿಗುಪ್ಸೆಗೊಂಡು ಬಹಿರ್ದೆಸೆಗೆಂದು ಹೋಗಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಾತ್ರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.