ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದಿನಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Vishwanath S
Updated On : 31 Aug 2013, 1:17 am

ಹೊಸಪೇಟೆ: ಕಿರ್ಲೋಸ್ಕರ್ ಮತ್ತು ಕ್ಲಬ್ ವಸುಂಧರ ಸಂಯುಕ್ತವಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆ. 31ರಿಂದ ಸೆ.1ರವರೆಗೆ ಏರ್ಪಡಿಸಿದೆ. ಈ ಬಾರಿ 'ನೀರು ಸಂರಕ್ಷಿಸಿ ಭವಿಷ್ಯ ರಕ್ಷಿಸಿ' ಎಂಬ ಘೋಷ ವಾಕ್ಯದೊಂದಿಗೆ ದೇಶಿ ಹಾಗೂ ವಿದೇಶಿ ನಿರ್ದೇಶಕರು ನಿರ್ದೇಶಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಆಯ್ದ 40 ಚಲನಚಿತ್ರಗಳು ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9ರ ವರೆಗೆ ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವ ಸಮಾರಂಭದಲ್ಲಿ ಪರಿಸರ, ವನ್ಯಜೀವಿ ಇತ್ಯಾದಿ ವಿಭಾಗದಲ್ಲಿ ಕೃಷಿ ಮಾಡಿದ ಅಗ್ರ ಗಣ್ಯರಿಗೆ ವಸುಂಧರಾ ಸಮ್ಮಾನ್, ವಸುಂಧರಾ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಾಲು ಮರದ ತಿಮ್ಮಕ್ಕ ಅವರಿಗೆ ವಸುಂಧರಾ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತದೆ. ಹಗರಿಬೊಮ್ಮನಹಳ್ಳಿ ತಾಲೂಕು ಶಿವಾನಂದನಗರ ಗ್ರಾಮದಲ್ಲಿ ಕೃಷಿ ಕಾಯಕದಲ್ಲಿ ತೊಡಗಿ ಸಾವಯವ ಕೃಷಿಯಲ್ಲಿ ಮಹತ್ತರ ಸಾಧನೆಗೈದ ಶಿವಪುತ್ರಪ್ಪ ಎಸ್. ಎತ್ತಿನಮನಿ ಅವರಿಗೆ ವಸುಂಧರಾ ಮಿತ್ರ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೇವೇಂದ್ರಪ್ಪ ಶಂಕ್ರಪ್ಪ ಬಳೂಟಗಿ ಇವರು ದಾಳಿಂಬೆ ಬೆಳೆಯಲ್ಲಿ ಸಾಧನೆ ಮಾಡಿ, ಅರಬ್, ಯುರೋಪ್ ದೇಶಗಳಿಗೆ ರಫ್ತು ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯನ್ನು ಗುರುತಿಸಲು ಸಾಧ್ಯವಾಗಿಸಿದ್ದು, ಇವರಿಗೂ ವಸುಂಧರಾ ಮಿತ್ರ ಪ್ರಶಸ್ತಿ ನೀಡಲಾಗುವುದು. ಸೆ.1ರಂದು ಸಮಾರೋಪ ನಡೆಯಲಿದ್ದು, ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯ ಡಾ.ಆರ್. ವಾಸುದೇವ ಭಾಗವಹಿಸಲಿದ್ದಾರೆ ಎಂದು ಕಿರ್ಲೋಸ್ಕರ್ ಸಂಸ್ಥೆ ಹಿರಿಯ ಉಪಾಧ್ಯಕ್ಷ ಬಿ. ಸತೀಶ್ ಶೆಟ್ಟಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement