ಮಣ್ಣಿನ ಫಲವತ್ತತೆ ಮುಖ್ಯ: ಸಲಹೆ
ಹೊಸಪೇಟೆ: ಬೆಳೆಗೆ ಮಣ್ಣಿನ ಫಲವತ್ತತೆ ಹಾಗೂ ಪೋಷಕಾಂಶಗಳು ಬಹಳ ಮುಖ್ಯ ಎಂದು ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶಿವಯೋಗಿ ಹೇಳಿದರು. ತಾಲೂಕಿನ ನಂಬರ್ 76 ವೆಂಕಟಾಪುರ ಗ್ರಾಮದಲ್ಲಿ ಕೃಷಿ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿ, ಬಾಳೆಯ, ಕಬ್ಬಿನಲ್ಲಿ ಬರುವ ರೋಗ ಮತ್ತು ಕೀಟಗಳ ಹತೋಟಿಗೆ ಕೈಗೊಳ್ಳಬೇಕೆಂದು ಅವರು ಸಭೆಯಲ್ಲಿ ವಿವರಿಸಿದರು. ಕೃಷಿ ಇಲಾಖೆ ಕೃಷಿ ಅಧಿಕಾರಿ ನದಾಫ್ ಮಣ್ಣಿನ ಪರೀಕ್ಷೆ, ರಸಗೊಬ್ಬರ ಉಪಯೋಗ, ಸಾವಯವ, ಎರೆಹುಳು, ಕಾಂಪೋಸ್ಟ್ ಗೊಬ್ಬರದ ಬಗ್ಗೆ ವಿವರಿಸಿದರು. ಬುಕ್ಕಸಾಗರ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಕೃಷಿ ಅಧಿಕಾರಿ ಉಷಾರಾಣಿ, ಲಿಂಗಪ್ಪ, ದುರುಗಪ್ಪ, ಜುವಾರಿ ಕಂಪನಿಯ ಎಂ.ಸಿ. ಗಿರೀಶ್ ಇದ್ದರು. ಎಚ್. ಶರಣಬಸವ ಸ್ವಾಗತಿಸಿ ವಂದಿಸಿದರು.