ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಾಗೃತಿ ವಹಿಸದಿದ್ದರೆ ಹಿಂದೂ ಧರ್ಮ ಅವನತಿ

Mainashree
Updated On : 1 Sept 2013, 11:14 am

ಕಂಪ್ಲಿ: ಜಾಗೃತಿ ವಹಿಸದಿದ್ದರೆ ಹಿಂದೂ ಧರ್ಮದ ಅವಶೇಷಗಳು ಇಲ್ಲದಂತಾಗುವ ಪರಿಸ್ಥಿತಿ ಬರಲಿದೆ ಎಂದು ಶ್ರೀಮದ್ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ, ವೈದಿಕ, ಜ್ಯೋತಿಷ್ಯ ಪಾಠ ಶಾಲೆಯಲ್ಲಿ ಹಮ್ಮಿಕೊಂಡಿರುವ ಅಲ್ಲೀಪುರ ಶ್ರೀಮಹಾದೇವ ತಾತನವರ ಲೀಲಾಮೃತ ಪುರಾಣ ಪ್ರವಚನ ಮತ್ತು 51 ಸಂವತ್ಸರಗಳ ಪುರಾಣದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಅವರು ಆಶೀರ್ವಚನ ನೀಡಿದರು. ದ್ವಾರಕೆ ಮತ್ತು ರಾಮಸೇತು ಹಿಂದೂ ಧರ್ಮದ ಅವಶೇಷಗಳಾಗಿದ್ದು, ಅವುಗಳನ್ನು ಉಳಿಸಲು ಜನಜಾಗೃತಿಯಾಗಬೇಕಿದೆ ಎಂದರು.
ಪುರಾಣಗಳು ಬದುಕಿಗೆ ದಾರಿ ದೀಪವಾಗಿವೆ. ಮನುಷ್ಯನ ಮುಕ್ತಿಗೆ ಧರ್ಮ ಮಾಧ್ಯಮವಾಗಿದೆ. ಧರ್ಮಕ್ಕೆ ಆಶ್ರಯ ನೀಡಿದರೆ ಮಾತ್ರ ಮನುಷ್ಯ ಜನ್ಮ ಶ್ರೇಷ್ಠವಾಗುತ್ತದೆ ಎಂದರು.
ಮೆರವಣಿಗೆ: ಇಲ್ಲಿನ ಪೇಟೆ ಬಸವೇಶ್ವರ ದೇವಸ್ಥಾನದಿಂದ ಸಾಂಗತ್ರಯ ಸಂಸ್ಕೃತ, ವೈದಿಕ, ಜ್ಯೋತಿಷ್ಯ ಪಾಠ ಶಾಲೆವರೆಗೆ ಸುಮಂಗಲೆಯರ ಕಳಸ, ಕನ್ನಡಿ, ಭಜನೆ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ಉಜ್ಜಯಿನಿ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಯಿತು.
ಬಿರುದು: ಸಾಂಗತ್ರಯ ಸಂಸ್ಕೃತ, ವೈದಿಕ, ಜ್ಯೋತಿಷ್ಯ ಪಾಠಶಾಲೆ ಮತ್ತು ವೀರಶೈವ ಸಮಾಜದ ವತಿಯಿಂದ ಹೊಸಪೇಟೆ ಗಣಿ ಮಾಲೀಕ ಗೊಗ್ಗ ಚನ್ನಬಸವರಾಜಗೆ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಗುರುತಿಸಿ 'ಧರ್ಮ ರತ್ನಾಕರ' ಬಿರುದು ಹಾಗೂ ಸಾಂಗತ್ರಯ ಸಂಸ್ಕೃತ, ವೈದಿಕ, ಜ್ಯೋತಿಷ್ಯ ಪಾಠ ಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿಗೆ ಪ್ರಾಚಾರ್ಯರಾಗಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ 'ಸೃಜನಶೀಲ ವಿದ್ಯಾಭಾಸ್ಕರ' ಬಿರುದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮರಿಯಮ್ಮನಹಳ್ಳಿ ಗುರುಪಾದ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹೊಸಪೇಟೆ ವಿಜಯನಗರ ಕಾಲೇಜ್ ಕನ್ನಡ ಉಪನ್ಯಾಸಕ ಡಾ.ಮೃತ್ಯುಂಜಯ ರುಮಾಲೆ, ಪುರಾಣ ಪ್ರವಚನಕಾರ ಸಿಂಧನೂರು ಕಲ್ಯಾಣಾಶ್ರಮ ಮಹಾಂತಸ್ವಾಮೀಜಿ ಮುದಗಲ್ಲ, ಸಂಗೀತ ಸಂಯೋಜಕ ಆರ್. ಶಂಕ್ರಯ್ಯಸ್ವಾಮಿ, ತಬಲವಾದಕ ಅಡಿವೇಶಕುಮಾರ, ಸಾಂಗತ್ರಯ ಸಂಸ್ಕೃತ, ವೈದಿಕ, ಜ್ಯೋತಿಷ್ಯ ಪಾಠಶಾಲೆ ಅಧ್ಯಕ್ಷ ಜವಳಿ ಚನ್ನಬಸಪ್ಪ, ಉಪಾಧ್ಯಕ್ಷ ಗೊಂದಿ ಈಶಪ್ಪ, ಕಾರ್ಯದರ್ಶಿ ನೂಲ್ವಿ ಮಹಾಂತೇಶ, ಶಾಲಾ ಸಂಚಾಲಕ ಡಾ. ಜಗನ್ನಾಥ ಹಿರೇಮಠ, ನಿರ್ದೇಶಕ ಬಣಗಾರ ಚಂದ್ರಪ್ಪ, ಕೆ. ಸಣ್ಣ ಗವಿಸಿದ್ದಪ್ಪ, ಕಾಮಿರೆಡ್ಡಿ ಚಂದ್ರಶೇಖರಪ್ಪ, ಮರ್ತೂರು ಶರಣಪ್ಪ, ಪಿ. ಕೊಟ್ರಪ್ಪ ಸೋಗಿ, ಪದಗುಂಡಿ ಬಸವರಾಜಪ್ಪ, ಎಚ್. ತಿಪ್ಪೇರುದ್ರಗೌಡ, ಎಸ್. ದೊಡ್ಡಬಸವರಾಜ, ಹೊಸಮಠ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಕಂಪ್ಲಿ ಫಿರ್ಕಾ ವೀರಶೈವ ಸಂಘದ ಮಾಜಿ ಅಧ್ಯಕ್ಷ ವಾಲಿ ಕೊಟ್ರಪ್ಪ, ಮುಕ್ಕುಂದಿ ಬಸವರಾಜ, ಆರ್. ಸೋಮಶೇಖರಗೌಡ, ಕಟ್ಟೆ ಉಮಾಪತಿ, ಮರ್ತೂರು ಸುರೇಶ ಹಾಗೂ ಕಂಪ್ಲಿ ಫಿರ್ಕಾ ವೀರಶೈವ ಸಮಾಜದ ಬಾಂಧವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement