ಬಳ್ಳಾರಿ: ಟಾಟಾ ಗೋಲ್ಡ್ಪ್ಲಸ್ ಮಳಿಗೆ ಆರಂಭ
ಬಳ್ಳಾರಿ: ಟಾಟಾ ಹೌಸ್ ಇದೀಗ ಜ್ಯುವೆಲರಿ ಬ್ರಾಂಡ್ ಗೋಲ್ಡ್ಪ್ಲಸ್ ಮಳಿಗೆಯನ್ನು ಬಳ್ಳಾರಿಯ ರಾಮೇಶ್ವರ ಹೋಟೆಲ್ ಸಮೀಪದಲ್ಲಿ ಪ್ರಥಮ ಬಾರಿಗೆ ಆರಂಭಿಸಿದೆ ಎಂದು ಟೈಟಾನ್ ಇಂಡಸ್ಟ್ರೀಸ್ನ ದಕ್ಷಿಣ ವಲಯ ವಹಿವಾಟು ಮುಖ್ಯಸ್ಥೆ ಮತ್ತು ಸಹ ಉಪಾಧ್ಯಕ್ಷೆ ಸುಪರ್ಣಾ ಮಿತ್ರಾ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೆ ನಗರ ಮತ್ತು ಗ್ರಾಮೀಣ ಭಾರತದಲ್ಲಿ ಗುಣಮಟ್ಟದ ಆಭರಣ ಒದಗಿಸುವ ಗುರಿ ಹೊಂದಿದ್ದು, 33 ರಿಟೆಲ್ ಮಳಿಗೆಯೊಂದಿಗೆ 4 ರಾಜ್ಯಗಳಲ್ಲಿ ಗೋಲ್ಡ್ಪ್ಲಸ್ ಮಳಿಗೆ ಆರಂಭಿಸಲಾಗಿದೆ. ಮಳಿಗೆಯಲ್ಲಿ ವಿವಿಧ ನಮೂನೆಯ ಶುದ್ಧ ಚಿನ್ನ, ವಜ್ರದ ಆಭರಣಗಳು, ಅಮೂಲ್ಯವಾದ ಹರಳುಗಳು ಗ್ರಾಹಕರಿಗೆ ಅನನ್ಯ ಖರೀದಿಯ ಅನುಭವ ನೀಡಲಿವೆ. ಗೋಲ್ಡ್ಪ್ಲಸ್ ಪ್ರತಿ ಗ್ರಾಂ ಆಭರಣಗಳ ಮೇಲೆ ರು. 50 ರಿಯಾಯ್ತಿ ಮತ್ತು ಆಭರಣ ಖರೀದಿ ಜತೆ ಖಚಿತ ಗಿಫ್ಟ್ ಪಡೆಯುವ ಅವಕಾಶ ನೀಡಲಾಗುತ್ತಿದೆ. ಈ ಅವಕಾಶ ಆ. 30ರಿಂದ ಸೆ. 4ರ ವರೆಗೆ ಮಾತ್ರ ಇರುತ್ತದೆ ಎಂದು ತಿಳಿಸಿದರು.ತಮಿಳುನಾಡಿನ ಹೊಸೂರುಗಳಲ್ಲಿ 1,50,000 ಚದರ ಅಡಿ ವಿಸ್ತ್ರೀರ್ಣದ ಉತ್ಪಾದಕ ಘಟಕ ಹೊಂದಿದ್ದು, ಹಳೆಯ ಚಿನ್ನದ ವಿನಿಮಯ, ಬಂಗಾರದ ಶುದ್ಧತೆ ಪರೀಕ್ಷೆ, ಕ್ಯಾರೆಟ್ ಮೀಟರ್, ಆಭರಣದ ಸರ್ವಿಸ್, ಗೋಲ್ಡ್ಪ್ಲಸ್ ಹೂಡಿಕೆ ಸ್ಕೀಂ, ವಿಶಾಲವಾದ ಮಳಿಗೆ ಕುರಿತು, ಹಲವಾರು ಗ್ಲೋಲ್ಡ್ಪ್ಲಸ್ನ ಸ್ಕೀಂಗಳು, ಭವಿಷ್ಯದ ಚಿನ್ನ ಖರೀದಿಯ ಯೋಜನೆ, ಗೋಲ್ಡ್ಪ್ಲಸ್ ಗ್ರಾಂ ಸ್ಕೀಂ, ಗೋಲ್ಡ್ಪ್ಲಸ್ನ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಒಂದೇ ಸೂರಿನಡಿ ವಿವಿಧ ಆಭರಣಗಳ ಸೇವೆಯನ್ನು ಗ್ರಾಹಕರಿಗೆ ನೀಡುವ ಪ್ರಯತ್ನ ಇದಾಗಿದೆ ಎಂದರು.ಶುಕ್ರವಾರ ಸಂಜೆ ರಾಮೇಶ್ವರ ಹೋಟೆಲ್ ಸಮೀಪದ ಮಾರುತಿ ಟವರ್ನಲ್ಲಿ 2000 ಚದರ ಅಡಿ ವಿಸ್ತೀರ್ಣಣದ ವಿಶಾಲವಾದ ಜಾಗದಲ್ಲಿ ಸ್ಥಾಪಿಸಿರುವ ಮಳಿಗೆಯನ್ನು ಬಳ್ಳಾರಿ ಶಾಸಕ ಅನಿಲ್ ಲಾಡ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವರಪ್ರಸಾದ್, ಮನೀಶ್ ಚಾವ್ಲಾ ಸೇರಿದಂತೆ ಇತರರು ಇದ್ದರು.