ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಯುವಕರಲ್ಲಿ ಆದರ್ಶ ಮಾಯ: ಶಾಸ್ತ್ರಿ ಕಳವಳ

Mainashree
Updated On : 1 Sept 2013, 11:16 am

ಹೊಸಪೇಟೆ: ವಿದ್ಯಾರ್ಥಿ, ಯುವಜನರಲ್ಲಿ ಆದರ್ಶ ಮತ್ತು ಮೌಲ್ಯಗಳು ಮರೆಯಾಗುತ್ತಿವೆ ಎಂದು ವಿಜಯನಗರ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಚ್.ಎಂ. ಚಂದ್ರಶೇಖರ್ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು.
ನಗರದ ಚಿತ್ತವಾಡ್ಗಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ಎನ್ನೆನ್ನೆಸ್ಸ್ ಘಟಕ ಮತ್ತು ನಾನಾ ಸಂಘಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಉತ್ತಮ ಸಂಸ್ಕಾರವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಲು ಮುಂದಾಗಬೇಕು. ಆದರೆ ಇತ್ತೀಚಿಗೆ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದರಿಂದ ಭಾರತೀಯ ಸಂಸ್ಕೃತಿ ನಿರಾಕರಣೆ ಮನೋಭಾವನೆ ತೋರುತ್ತಿರುವುದು ಸರಿಯಲ್ಲ. ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಲು ಮುಂದಾಗಬೇಕು ಎಂದು ಹೇಳಿದರು.
ಸೇವಾ ಮನೋಭಾವ ರೂಢಿಸಿಕೊಳ್ಳಿ: ಬೆಳಗಾವಿ ವಿಭಾಗದ ಎನ್ನೆನ್ನೆಸ್ಸೆ ಸಂಯೋಜನಾಧಿಕಾರಿ ಪಿ.ಎಸ್. ಗಿರಿರಾಜ್ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವಗುಣ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ವೇದಿಕೆ ಉತ್ತಮವಾಗಿದೆ. ಸೇವಾ ಮನೋಭಾವನೆಯನ್ನು ವಿದ್ಯಾರ್ಥಿ ದಿಸೆಯಲ್ಲೇ ರೂಢಿಸಿಕೊಂಡಾಗ ಮುಂದಿನ ಜೀವನದಲ್ಲಿ ಸಹ ಸೇವಾ ಮನೋಭಾವನೆಯಿಂದ ಜೀವನ ಸಾಗಿಸಲು ನೆರವಾಗಲಿದೆ ಎಂದರು.
ಕಾಲೇಜು ಪ್ರಭಾರಿ ಪ್ರಾಚಾರ್ಯೆ ಕೆ. ರಮಾ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುಖಂಡ ಶ್ರೀರಾಂ, ಕಾಲೇಜಿನ ಉಪನ್ಯಾಸಕ ಜೀಲಾನ್, ಅರ್ಜುನ್, ಕೊಟ್ರೇಶಪ್ಪ, ಭೀಮರಾಜ್, ಮಂಜುಳಾ, ಪ್ರಭಾವತಿ, ಕೆ. ಸುರೇಶ್ ಚೌವ್ಹಾಣ್, ಗೌಸಿಯಾ, ಶಬ್ಬೀರ್, ಮಂಜುನಾಥ್, ಗೋವಿಂದ್, ಶ್ರುತಿ, ಮಾಧುರಿ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಶೀನ ನಾಡೋಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement