ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಬಳ್ಳಾರಿ: ನಗರದ ತಾಳೂರು ಹಾಗೂ ಚೇಳ್ಳಗುರ್ಕಿ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಅಖಿಲ ಭಾರತ ಜನಗಣ ಫೆಡರೇಷನ್ ಆಗ್ರಹಿಸಿದೆ.
ತಾಲೂಕಿನ ಗೋನಾಳ, ಶಂಕರಬಂಡೆ, ರೂಪನಗುಡಿ ಮೂಲಕ ಚೇಳ್ಳಗುರ್ಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಬಳ್ಳಾರಿಯಿಂದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದರು.ಛ
ಹದಗೆಟ್ಟಿರುವ ರಸ್ತೆಗಳಲ್ಲಿ ಸುಗಮ ಸಂಚಾರವಿಲ್ಲದೆ, ರೋಗಿಗಳು ತೊಂದರೆ ಪಡುವಂತಾಗಿದೆ. ಈ ಕುರಿತು ಈಗಾಗಲೆ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಆದರೂ, ಈ ವರೆಗೂ ಕ್ರಮಕೈಗೊಂಡಿಲ್ಲ. ಹೀಗಾಗಿ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು. ಚೇಳ್ಳಗುರ್ಕಿ-ತಾಳೂರು ರಸ್ತೆಯನ್ನು 45 ಅಡಿಗಳಿಂದ 138 ಅಡಿಗಳ ಅಗಲದ ರಸ್ತೆಯನ್ನಾಗಿ ಪರಿವರ್ತಿಸಿ, ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಫೆಡರೇಷನ್ ಸಂಚಾಲಕ ಗಂಗೀರೆಡ್ಡಿ, ತಿಮ್ಮಾರೆಡ್ಡಿ, ಹನುಮವ್ವ, ಎಂ. ಬಂಡಯ್ಯಸ್ವಾಮಿ, ವೀರಭದ್ರ ರೆಡ್ಡಿ, ಕೃಷ್ಣ, ವಿರೂಪಾಕ್ಷಗೌಡ, ಹನುಮಂತರೆಡ್ಡಿ, ರಾಮರೆಡ್ಡಿ, ಸಿ. ನಾಗರಾಜ, ಬಿ. ಆನಂದ, ಎಸ್. ಗೋಪಾಲ, ಕೃಷ್ಣ, ಎಸ್. ವಿಜಯ್ ಇದ್ದರು.