ಜಿಂಕೆ ಮಾಂಸ ಮಾರಾಟ: ಬಂಧನ
ಹೊಸಪೇಟೆ: ಜಿಂಕೆ ಮಾಂಸ, ಕೊಂಬು ಹಾಗೂ ಚರ್ಮ ಮಾರುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಭಾನುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೊಸಪೇಟೆ ನಗರ ನಿವಾಸಿ ದೊಡ್ಡಶಿವಪ್ಪ ಎಂಬಾತ ನಗರದ ಊರಮ್ಮ ಬಯಲು ಪ್ರದೇಶದಲ್ಲಿ ಭಾನುವಾರ ಒಂದು ಚಿಂಕೆ ಚರ್ಮ, 6 ಕೊಂಬು, 1 ಕೆ.ಜಿ. ಮಾಂಸ, 2 ಕೆ.ಜಿ. ಕಾಡು ಬೆಕ್ಕಿನ ಮಾಂಸವನ್ನು ಮಾರುತ್ತಿರುವಾಗ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿದಾಳಿ ನಡೆಸಿ ಬಂಧಿಸಿದೆ.