ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹೆಚ್ಚು ಅರಿವಿನಿಂದ ರೋಗ ನಿಯಂತ್ರಣ

Vishwanath S
Updated On : 2 Dec 2013, 11:56 am

ಹಗರಿಬೊಮ್ಮನಹಳ್ಳಿ: ಏಡ್ಸ್ ವಿಶ್ವ ಮನುಕುಲವನ್ನು ಬಾಧಿಸುತ್ತಿರುವ ಮಹಾಮಾರಿ ರೋಗ. ಜನರಲ್ಲಿ ರೋಗದ ಬಗ್ಗೆ ಸರಿಯಾದ ತಿಳಿವಳಿಕೆ, ಜಾಗೃತಿ ಇಲ್ಲದಿರುವುದೇ ಇಂದು ಈ ರೋಗ ವ್ಯಾಪಕ ಪ್ರಮಾಣದಲ್ಲಿ ಹರಡಲು ಕಾರಣವಾಗಿದೆ. ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳುವ ಮೂಲಕ ಈ ರೋಗ ನಿಯಂತ್ರಿಸಲು ಮುಂದಾಬೇಕು ಎಂದು ಸಿಪಿಐ ಮಲ್ಲೇಶ ದೊಡ್ಡಮನಿ ತಿಳಿಸಿದರು.
ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಭಾನುವಾರ ಪಟ್ಟಣದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಮ್ಮಿಕೊಂಡಿದ್ದ ಏಡ್ಸ್ ಜನಜಾಗೃತಿ ಬೈಕ್‌ರ್ಯಾಲಿ ಜಾಥಾಕ್ಕೆ ಹಳೇ ಹಗರಿಬೊಮ್ಮನಹಳ್ಳಿಯ ನೀರಾವರಿ ಇಲಾಖೆ ಅವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಅನಕ್ಷರತೆ, ಅಜ್ಞಾನ, ತಿಳಿವಳಿಕೆ ಇಲ್ಲದಿರುವುದೆ ರೋಗ ಹರಡಲು ಕಾರಣ. ಸುರಕ್ಷತೆ, ತಿಳಿವಳಿಕೆಯಿಂದ ಈ ರೋಗವನ್ನು ನಿಯಂತ್ರಣ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮಿತಿಯವರು ಆಯೋಜಿಸಿರುವ ಈ ಕಾರ್ಯ ತಾಲೂಕಿನ ಪ್ರತಿ ಹಳ್ಳಿಗೂ ವಿಸ್ತರಿಸುವ ಮೂಲಕ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಎಂದರು.
ಬೈಕ್‌ರ್ಯಾಲಿ ತಂಬ್ರಹಳ್ಳಿ ಸರ್ಕಲ್, ಹಗರಿ ಬ್ರಿಡ್ಜ್, ಬಸವ ವೃತ್ತದ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಂತರ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಏಡ್ಸ್ ತಡೆಗೆ ಪ್ರತಿಜ್ಞೆ ಮಾಡಿದರು. ಸಮಿತಿಯ ಕಾರ್ಯದರ್ಶಿ ಪ್ರಕಾಶ್, ಸಕ್ರಗೌಡ, ಶೇಖರ್ ಗಿರಿರಡ್ಡಿ, ಕೆ. ಜನಾರ್ದನ ಏಡ್ಸ್ ಕುರಿತ ಸ್ವರಚಿತ ಗೀತೆ ಹಾಡಿ ನೆರೆದಿದ್ದ ಜನತೆಯಲ್ಲಿ ಜಾಗೃತಿ ಮೂಡಿಸಿದರು.
ಸಮಿತಿ ಅಧ್ಯಕ್ಷ ಎಸ್. ಥಾವರೇನಾಯ್ಕ, ಚಿಲಿಪಿಲಿ ಬಳಗದ ಜಿಲ್ಲಾಧ್ಯಕ್ಷ ಎಲ್. ರೆಡ್ಡಿ ನಾಯ್ಕ, ಸಮಿತಿಯ ಎಸ್. ಕೊಟ್ರೇಶ್, ಎಚ್.ಎಂ. ಉಮಾಪತಿ, ಬಿ. ಚಂದ್ರಪ್ಪ, ರಘುಕುಮಾರ್ ಕೆ.ಪಿ., ಎನ್. ಸುರೇಶ, ಕೆ.ಎಸ್. ವೀರೇಶ್, ಕೊಟಗಿ ಕೊಟ್ರಪ್ಪ, ಪಂಚಪ್ಪ, ಸಿ. ರವಿ, ಎಚ್. ಜಯಪ್ಪ, ಎನ್.ಎಂ. ಶಿಲ್ಪಿ, ಶಿವಲಿಂಗಸ್ವಾಮಿ, ಸಕಲೇಶ್ವರ ಪಿ.ಜಿ, ಉಸ್ಮಾನ್‌ಸಾಬ್, ಎ. ಕರಿಬಸಪ್ಪ, ಯು. ಹಾಲಪ್ಪ, ಜೆ. ಉಮೇಶ್, ಐ.ಇ.ಡಿ. ಹನುಮಂತ, ವೇದಮೂರ್ತಿ, ಸೋಮಶೇಖರ್, ಮಹಾಂತೇಶ್ ನಾಯ್ಕ, ಮುನೀರ್‌ಬಾಷಾ, ಗುಡ್ಡಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement