ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಾಗತೀಕರಣಕ್ಕೆ ಕನ್ನಡ ನಲುಗಿದೆ: ಶಶಿಧರ

Vishwanath S
Updated On : 3 Dec 2013, 10:59 am

ಹೊಸಪೇಟೆ: ಜಾಗತೀಕರಣ ಎಲ್ಲವನ್ನು ಮಟ್ಟ ಹಾಕುತ್ತಿದೆ. ಇದಕ್ಕೆ ಕರ್ನಾಟಕ ಹೊರತಲ್ಲ. ಕಷ್ಟದಿಂದ ಉಸಿರುಕಟ್ಟಿ ಕನ್ನಡ ಮಾತಾಡುವ ಪರಿಸ್ಥಿತಿ ಇದೆ ಎಂದು ಮಂಗಳೂರು ವಿವಿಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಆರ್. ಶಶಿಧರ ಹೇಳಿದರು.
ಹಂಪಿ ಕನ್ನಡ ವಿವಿಯ ಸಮಾಜ ವಿಜ್ಞಾನಗಳ ನಿಕಾಯವು ಸಮಾಜ ವಿಜ್ಞಾನಗಳ ನೆಲೆಗಳು ಕನ್ನಡ-ಕರ್ನಾಟಕ ಕುರಿತು ಭುವನವಿಜಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾಗತೀಕರಣ ಮತ್ತು ಕಾರ್ಪೋರೇಟ್ ಕಾಲೊನೈಸೇಷನ್ ಕುರಿತು ಗಮನ ಸೆಳೆಯುತ್ತ, ಇವೆರಡು ಎಲ್ಲ ಸಂಸ್ಕೃತಿಗಳನ್ನು ಹತ್ತಿಕ್ಕಿಕೊಂಡು ಹೋಗುವಂಥವು. ಇದರ ಪರಿಣಾಮ ಕನ್ನಡ ಭಾಷೆಗೆ ಮಾತ್ರವಲ್ಲ. ಪ್ರಪಂಚದ ದೊಡ್ಡ ಭಾಷೆಗಳಿಗೂ ಇದೇ ಸ್ಥಿತಿ ಇದೆ. ಜತೆಗೆ ಕರ್ನಾಟಕದಲ್ಲಿ ಎದ್ದಿರುವ ಪ್ರತ್ಯೇಕತಾವಾದದ ಒತ್ತಡದಿಂದ ಕನ್ನಡ ಕರ್ನಾಟಕ ನಲುಗುತ್ತಿದೆ ಎಂದರು.
ಹಂಪಿ ಕನ್ನಡ ವಿವಿಯ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಮಾತನಾಡಿದರು. ಹಂಪಿ ಕನ್ನಡ ವಿವಿಯ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ, ವಿಚಾರ ಸಂಕಿರಣದ ಸಂಚಾಲಕ ಡಾ.ಕೆ.ಎಂ. ಮೇತ್ರಿ ಭಾಗವಹಿಸಿದ್ದರು. ಮಂಗಳೂರು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಆರ್. ಶಶಿಧರ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ರತ್ನಮ್ಮ ಪ್ರಾರ್ಥಿಸಿದರು. ಡಾ.ಸಿ.ಎಸ್. ವಾಸುದೇವನ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement