ಪಠ್ಯೇತರ ಚಟುವಟಿಕೆ ಅವಶ್ಯ: ಈಶಣ್ಣ
ಹೂವಿನಹಡಗಲಿ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ನಿರಂತರವಾಗಿ ಇಂತಹ ಚಟುವಟಿಕೆಗಳಿಗೆ ಹೆಚ್ಚಿನ ಗಮನ ಹರಿಸಬೇಕೆಂದು ಓಲಿ ಈಶಣ್ಣ ತಿಳಿಸಿದರು.
ತಾಲೂಕಿನ ಕೊಯಿಲಾರಗಟ್ಟಿ ಸರ್ಕಾರಿ ಶಾಲೆಯಲ್ಲಿ 2013-14ನೇ ಸಾಲಿನ ಹೂವಿನಹಡಗಲಿ ಗ್ರಾಮೀಣ ಮಟ್ಟದಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು. ಸಿಆರ್‌ಪಿ ಮಧು ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಕ್ಲಸ್ಟರ್‌ನ 13 ಶಾಲೆಗಳಿಂದ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಓಲಿ ಸೋಮಶೇಖರ್, ಉಪಾಧ್ಯಕ್ಷ ಚಿಂತಿ ಗುಡಗಿರಮ್ಮ, ವಿ. ರಂಗನಾಥ, ಎಚ್. ಕೊಟ್ರೇಶ, ಅಶೋಕ, ಎಚ್. ದೇವರಾಜ, ಡಿ. ದುಶಾಂತ, ಜಿ. ಪರಶುರಾಮ, ಸಮನ್ವಯ ಅಧಿಕಾರಿ ಸಿ.ಜೆ. ಮಲ್ಲಪ್ಪ ಇದ್ದರು. ಡಿ. ಹಾಲಪ್ಪ ಸ್ವಾಗತಿಸಿದರು. ಜಿ. ಪ್ರಕಾಶ ನಿರೂಪಿಸಿದರು. ಪ್ರಕಾಶ ವಂದಿಸಿದರು.