ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಒಳನಾಡು ಮೀನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

Vishwanath S
Updated On : 5 Dec 2013, 11:04 am

ಬಳ್ಳಾರಿ: ಬಿ.ಆರ್. ಪ್ರಾಜೆಕ್ಟ್‌ನ ಮೀನುಗಾರಿಕಾ ತರಬೇತಿ ಕೇಂದ್ರದಲ್ಲಿ ಡಿ. 16 ರಿಂದ ಒಳನಾಡು ಮೀನುಗಾರಿಕೆ ತರಬೇತಿ ನೀಡಲು ಅರ್ಹ ಗ್ರಾಮೀಣ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತರಬೇತಿ ಅವಧಿ 2 ತಿಂಗಳಿನದಾಗಿದ್ದು, ಈ ಅವಧಿಯಲ್ಲಿ ಆಯ್ಕೆಯಾದವರಿಗೆ ಮಾಹೆಯಾನ ರು. 1000 ಶಿಷ್ಯವೇತನ ನೀಡಲಾಗುವುದು. ಮೀನುಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಮೀನು ಸಾಕಾಣಿಕೆ ಮತ್ತಿತರ ವಿಷಯ ಕುರಿತು ತರಬೇತಿ ನೀಡಲಾಗುವುದು. ಅರ್ಜಿಯನ್ನು ಅಂಚೆ ಮೂಲಕ ಪಡೆಯಲಿಚ್ಛುಸುವವರು ತಮ್ಮ ಕೋರಿಕೆ ಪತ್ರದೊಂದಿಗೆ ರು. 5 ಅಂಚೆ ಚೀಟಿ ಅಂಟಿಸಿದ ಸ್ವವಿಳಾಸವುಳ್ಳ 9/4 ಅಳತೆಯ ಲಕೋಟೆಯನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1), ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್. ಪ್ರಾಜೆಕ್ಟ್, ಭದ್ರಾವತಿ ತಾಲೂಕು, ಶಿವಮೊಗ್ಗ-577115 ಇವರಿಗೆ ಕಳುಹಿಸಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಡಿ. 10ರೊಳಗಾಗಿ ಇದೇ ಕಚೇರಿಗೆ ಕಳುಹಿಸಬೇಕು. ದೂರವಾಣಿ ಸಂಖ್ಯೆ ತಪ್ಪದೇ ನಮೂದಿಸಬೇಕು. ಮಾಹಿತಿಗೆ ದೂ.ಸಂ- 08282-256252 ಅಥವಾ ಇ-ಮೇಲ್ ವಿಳಾಸ ಛಜಜಿ-ಡ್ಠ್ಜಿ-ಛ್ಠಿಠ-್ಞಛಅಟ್ಝ್ಛಿ.್ಝಟಿ ಅನ್ನು ಅಥವಾ ಜಿಲ್ಲಾ, ತಾಲೂಕು ಮಟ್ಟದ ಮೀನುಗಾರಿಕಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement