ಚಿನ್ನಾಭರಣ, ನಗದು ಸಮೇತ ಯುವಕ ಕಾಣೆ
ಬಳ್ಳಾರಿ: ರೇಣುಕಾನಗರದ ನಿವಾಸಿ ಜಿ. ಬಸವನಗೌಡ ಅವರ 19 ವರ್ಷದ ಮೊಮ್ಮಗ ಜಿ. ಗೋಪಾಲಕೃಷ್ಣ ಡಿ. 3ರಂದು ರಾತ್ರಿ 8 ಗಂಟೆಯಿಂದ ಮನೆಯಲ್ಲಿಟ್ಟಿದ್ದ ಬಂಗಾರದೊಡವೆ ಹಾಗೂ ನಗದಿನೊಂದಿಗೆ ಕಾಣೆಯಾಗಿದ್ದಾನೆ ಎಂದು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವಕ ಸಂಜಯಗಾಂಧಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಮೆಕ್ಯಾನಿಕ್ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಡಿ. 3ರಂದು ರಾತ್ರಿ 8 ಗಂಟೆಗೆ ಮನೆಯಿಂದ ಹೊರ ಹೋದವನು ಮರಳಿಲ್ಲ. ಹೋಗುವಾಗ ಮನೆಯಲ್ಲಿದ್ದ ಒಂದೊಂದು ತೊಲೆಯ 2 ಬಂಗಾರದ ಚೈನು, 5 ತೊಲೆಯ ಒಂದು ಚಿನ್ನದ ಸರ, 6 ತೊಲೆಯ ಬಂಗಾರದ 4 ಬಳೆಗಳು, 3 ತೊಲೆಯ ಚಿನ್ನದ ಸರ, 2 ತೊಲೆಯ ಒಂದು ಸರ, ಅರ್ಧ ತೊಲೆಯ ಒಂದು ಉಂಗುರ, ರು. 5500 ನಗದು ಹಾಗೂ ಬೂದಿ ಬಣ್ಣದ ಬೆನ್ನಿಗೆ ಹಾಕಿಕೊಳ್ಳುವ ಸ್ಕೂಲ್‌ಬ್ಯಾಗ್‌ನೊಂದಿಗೆ ಹೋಗಿದ್ದಾನೆ. ಗೋಪಾಲಕೃಷ್ಣ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಹೊಂದಿರುತ್ತಾನೆ. ಸುಳಿವು ಸಿಕ್ಕಲ್ಲಿ ದೂ.ಸಂ-8392-276461, 9480803049, 08392-258100 ಅಥವಾ ಸಮೀಪದ ಠಾಣೆಯನ್ನು ಸಂಪರ್ಕಿಸಬೇಕೆಂದು ಇನ್‌ಸ್ಪೆಕ್ಟರ್ ಮನವಿ ಮಾಡಿದ್ದಾರೆ.