ಅಪರಾಧ ತಡೆಗೆ ಜನ ಸಹಕಾರ ಅಗತ್ಯ
ಕಂಪ್ಲಿ: ಅಪರಾಧಗಳ ನಿಯಂತ್ರಣ ಮತ್ತು ಅಪರಾಧಿಗಳ ಪತ್ತೆಯಲ್ಲಿ ಸಾರ್ವಜನಿಕರ ಸಹಕಾರ ಮಹತ್ವದ್ದಾಗಿದ್ದು, ಜನತೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹಂಪಿ ವಿಭಾಗದ ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ 2013ರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನತೆ ಕಾನೂನು ತಿಳಿವಳಿಕೆ ಹೊಂದಲು ಮುಂದಾಗಬೇಕು. ಅಪರಾಧಗಳ ಪತ್ತೆ ಕಾರ್ಯದಲ್ಲಿ ಪೊಲೀಸ್ ಇಲಾಖೆಗೆ ಮುಕ್ತವಾಗಿ ಸಹಕರಿಸಿದಾಗ ಮಾತ್ರ ಅಪರಾಧಗಳನ್ನು ಗಣನೀಯವಾಗಿ ನಿಯಂತ್ರಿಸಲು ಸಾಧ್ಯ. ಜನತೆ ಸಹಕರಿಸಬೇಕು ಎಂದು ಹೇಳಿದರು.
ಸಿಪಿಐ ಆರ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ಉಲ್ಲಂಘನೆಯಿಂದ ಅಪರಾಧಗಳು ಸಂಭವಿಸುತ್ತವೆ. ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವುದರಿಂದ ಅಪಘಾತಗಳನ್ನು ತಡೆಗಟ್ಟುವುದಲ್ಲದೆ ಪ್ರಾಣವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯ. ತಿಳಿದೋ, ತಿಳಿಯದೆಯೋ ಆಗುವ ಅಪರಾಧಗಳು ಕಾನೂನಿನನ್ವಯ ಶಿಕ್ಷೆಯನ್ನುಂಟು ಮಾಡುತ್ತವೆ. ವಿದ್ಯಾರ್ಥಿಗಳಿಗೆ ಅಪರಾಧ ತಡೆ ಕುರಿತು ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪಿಎಸ್ಐ ಡಿ. ಹುಲುಗಪ್ಪ ಅಪರಾಧ ನಿಯಂತ್ರಣ ಮಾಹಿತಿಯುಳ್ಳ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿದರು.
ಪಿಎಸ್ಐ ಎಚ್. ದೊಡ್ಡಣ್ಣ, ಪುರಸಭೆ ಸದಸ್ಯರಾದ ಬಿ. ನಾಗರಾಜ್, ಎಸ್. ಸುರೇಶ್, ಮುಖಂಡರಾದ ಎಂ.ಸಿ. ಮಾಯಪ್ಪ, ಡಿ.ಎಚ್.ಎಂ. ರವೀಂದ್ರ, ಎಸ್.ಜಿ. ಚಿತ್ರಗಾರ್, ಶೇಖರ್ ಹೊರಪೇಟೆ, ಅಂಚೆ ಅಜುರುದ್ದೀನ್, ಎಚ್. ಗುಂಡಪ್ಪ ಮೆಟ್ರಿ, ಎಚ್. ಈರಣ್ಣ, ಜಾಫರ್, ಜಿಲಾನ್, ಬಿ. ವೆಂಕಟೇಶ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಜನತೆ ಕಾನೂನು ತಿಳಿವಳಿಕೆ ಹೊಂದಬೇಕು. ಅಪರಾಧಗಳ ಪತ್ತೆ ಕಾರ್ಯದಲ್ಲಿ ಪೊಲೀಸ್ ಇಲಾಖೆಗೆ ಮುಕ್ತವಾಗಿ ಸಹಕರಿಸಿದಾಗ ಮಾತ್ರ ಅಪರಾಧಗಳನ್ನು ಗಣನೀಯವಾಗಿ ನಿಯಂತ್ರಿಸಲು ಸಾಧ್ಯ.
ಕಾನೂನು ಉಲ್ಲಂಘನೆಯಿಂದ ಅಪರಾಧಗಳು ಸಂಭವಿಸುತ್ತವೆ. ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವುದರಿಂದ ಅಪಘಾತಗಳನ್ನು ತಡೆಗಟ್ಟುವುದಲ್ಲದೆ ಪ್ರಾಣವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯ.