ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಲ್ಯಾಣಸ್ವಾಮಿ ಮಠದಲ್ಲಿ ಸಾಯಿರಾತ್ರಿ ಕಾರ್ಯಕ್ರಮ

Vishwanath S
Updated On : 7 Dec 2013, 10:50 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 6
ತಾಲೂಕಿನ ಕಮ್ಮರಚೇಡು ಗ್ರಾಮದ ಶ್ರೀ ಕಲ್ಯಾಣಸ್ವಾಮಿ ಮಹಾಸಂಸ್ಥಾನ ಮಠದಲ್ಲಿ ಗುರುವಾರ 178ನೇ ವರ್ಷದ ಶ್ರೀ ಶಿರಡಿ ಸಾಯಿಬಾಬಾ ಅವರ ಸಾಯಿರಾತ್ರಿ ಕಾರ್ಯಕ್ರಮ ಜರುಗಿತು.
ಶ್ರೀ ಗುರು ಕಲ್ಯಾಣ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಲ್ಯಾಣಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಭಕ್ತಿ ಮಾರ್ಗದಿಂದ ಮನುಷ್ಯನು ಸುಖ, ಶಾಂತಿ, ನೆಮ್ಮದಿ ಹಾಗೂ ಎಲ್ಲ ಸಂಪತ್ತನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಒಬ್ಬ ಮನುಷ್ಯ ಒಂದು ಮನೆಗೆ ಹೋಗಲು ಪರಿಚಯ ಅತ್ಯಗತ್ಯ. ಆದರೆ, ಮಠಗಳಿಗೆ ಹೋಗಲು ಯಾವುದೇ ಪರಿಚಯ ಅಗತ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಭಕ್ತಿಯ ಮಾರ್ಗದ ಅವಶ್ಯಕತೆಯಿದೆ ಎಂದರು.
ಸಾಯಿರಾತ್ರಿ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಂಜೆ ಬಾಬಾಗೆ ಧೂಪ ಆರತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶಿರಡಿ ಸಾಯಿಬಾಬಾ ಅವರ ಜೀವನ ಚರಿತ್ರೆಯ ಅಧ್ಯಯನ, ಭಕ್ತಿ ಗೀತೆಗಳ ಗಾಯನವನ್ನು ಸಾಯಿ ಸೇವಕರಾದ ನರಸಪ್ಪ ಆದೋನಿ, ಚಂದ್ರಶೇಖರ, ಶಿವಕುಮಾರ್, ಪರಮೇಶ್ವರಪ್ಪ, ಶಶಿಕಲಮ್ಮ, ರಕ್ಷಿತಾ, ಶಿಲ್ಪಾವತಿ ಇತರರು ನಡೆಸಿಕೊಟ್ಟರು.   
ಕಾರ್ಯಕ್ರಮದಲ್ಲಿ ಕುರುಗೋಡು ರಾಘವಾಂಕ ಮಠದ ರಾಘವಾಂಕ ಮಲ್ಲಿಕಾರ್ಜುನ ಶಿವಾಚಾರ್ಯರು, ವಿರಕ್ತಮಠದ ಗುರುಬಸವಸ್ವಾಮೀಜಿಗಳು ಭಾಗವಹಿಸಿದ್ದರು.
ಸಾಯಿರಾತ್ರಿ ಕಾರ್ಯಕ್ರಮದಲ್ಲ್ಕಿ ಕಮ್ಮರಚೇಡು ಗ್ರಾಮದ ಭಕ್ತಾಧಿಗಳು ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಸಾರ್ವಜನಿಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement