ತುಳಿತಕ್ಕೊಳಗಾದವರಿಗೆ ಅಂಬೇಡ್ಕರ್ ಮಾದರಿ
ಕೊಟ್ಟೂರು: ಡಾ. ಬಿ.ಆರ್. ಅಂಬೇಡ್ಕರ್ ಜೀವನ, ಸಾಧನೆ ಕೇವಲ ದಲಿತರಿಗೆ ಮಾತ್ರವಲ್ಲದೆ ತುಳಿತಕ್ಕೊಳಗಾದವರ ಜನ ಸಮೂಹಕ್ಕೆ ಮಾದರಿಯಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಬುಗ್ಗಳ್ಳಿ ಕೊಟ್ರೇಶ್ ಹೇಳಿದರು.
ಅಂಬೇಡ್ಕರ್ 57 ಪರಿನಿರ್ವಾಣ ದಿನಾಚರಣೆ ಅಂಗವಾಗಿ ಇಲ್ಲಿನ ಡಿಎಸ್‌ಎಸ್ ಆಯೋಜಿಸಿದ್ದ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.
ವಕೀಲ ಟಿ. ಹನುಮಂತಪ್ಪ, ಟಿ. ಮೈಲಪ್ಪ, ಎಚ್. ಪರಶುರಾಮ್, ಬಿ. ಕುಮಾರಪ್ಪ, ಕೆ.ಎಚ್. ವೀರಭದ್ರಪ್ಪ, ಬರಹಗಾರ ಗೌರಿಹಳ್ಳಿ ಮಂಜುನಾಥ ಅರ್ಜುನಪ್ಪ, ಪರಸಪ್ಪ, ಭರಮಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಭದ್ರಾವತಿಯಲ್ಲಿ ಅಪ್ರಾಪ್ತ ವಯಸ್ಕ ದಲಿತ ಬಾಲಕಿ ಪಾರ್ವತಿ ಮೇಲಿನ ಹಲ್ಲೆಯನ್ನು ಇದೇ ಸಂದರ್ಭದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದವರು ಖಂಡಿಸಿ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.