ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಸ್ಮರಣೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 6
ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 57ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ವಿವಿಧ ದಲಿತಪರ ಸಂಘಟನೆಗಳು ಶುಕ್ರವಾರ ನಗರದ ಹೊಸಪೇಟೆ ರಸ್ತೆಯಲ್ಲಿನ ಅಂಬೇಡ್ಕರ್ ಭವನದ ಮುಂಭಾಗದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದವು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮುಂಡ್ರಿಗಿ ನಾಗರಾಜ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಎಸ್. ವಿಘ್ನೇಶ್, ಪಿ. ಜಗದೀಶ್ವರ್ ರೆಡ್ಡಿ, ಸ್ಟೋರ್ ಬಸಪ್ಪ, ಕುಡತಿನಿ ವೆಂಕಟೇಶ, ಎಚ್. ವೆಂಕಟೇಶ್, ಜಿ. ಗೋವರ್ಧನ, ರಾಜ, ಎಚ್. ಶಿವಣ್ಣ, ಕುಬೇರಾ, ನಟರಾಜ, ಮುರಳಿ, ಲಕ್ಷ್ಮಣ, ಮಲ್ಲಿ ಇತರರಿದ್ದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎ. ಈಶ್ವರಪ್ಪ ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಸಮಿತಿ ಜಿಲ್ಲಾಧ್ಯಕ್ಷ ಸಿ. ಸೋಮಶೇಖರ್, ಪದಾಧಿಕಾರಿಗಳಾದ ಬಾಪೂಜಿನಗರ ಶಿವಕುಮಾರ್, ಬಿ. ಗುರುಸಿದ್ದಪ್ಪ, ರಾಮಣ್ಣ ತೊಂಡಲಂ, ತಿಪ್ಪೇಸ್ವಾಮಿ, ಬಿ.ಎಚ್. ತಾಯಣ್ಣ, ಚೆಳ್ಳಗುರ್ಕಿ ರಾಮಣ್ಣ, ಎಂ. ಮುಕ್ಕಣ್ಣ, ಈರಪ್ಪ, ಉಮೇಶ್, ಹೊನ್ನೂರಪ್ಪ, ಪಿ.ಕುಮಾರ್, ಅನಿಲ್ ಕುಮಾರ್, ಕೆ. ಪ್ರಕಾಶ್ ಮತ್ತಿತರರಿದ್ದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ವತಿಯಿಂದ ಜಿಲ್ಲಾಧ್ಯಕ್ಷ ಎಚ್. ಅರ್ಜುನ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೇಂದ್ರ, ಮಾದಿಗ ದಂಡೋರದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಸಂಗನಕಲ್ಲು, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಆರ್. ಮೊಹಮ್ಮದ್ ಅಜಾಮ್, ಎಂ. ಲಕ್ಷ್ಮೀಕಾಂತ್, ಟಿ. ದುರುಗೇಶ್ ಮತ್ತಿತರರಿದ್ದರು.
ದಸಂಸ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀ ನಾರಾಯಣ ನಾಗವರ ಬಣ)ಯ ಜಿಲ್ಲಾ ಶಾಖೆ ಜಿಲ್ಲಾಸಂಚಾಲಕ ಕೆ. ವೆಂಕಟೇಶ್ ಮೂರ್ತಿ, ಸಂಘಟನಾ ಸಂಚಾಲಕ ಎಚ್. ರಮೇಶ್ ಗೋನಾಳ್, ಕೆ. ನಾಗರಾಜ, ಎಂ. ಶಿವಪ್ಪ, ಟಿ. ರಾಮಾಂಜಿನಯ್ಯ, ಉತ್ತಿಪ್ಪ, ಚೆಳ್ಳಗುರ್ಕಿ ಸುರೇಶ್, ಟಿ. ತಾಯಣ್ಣ, ಎಸ್. ತಾಯಣ್ಣ, ಎಸ್. ನಾಗಭೂಷಣ, ಎಚ್. ಶಂಕ್ರಪ್ಪ, ಡಿ. ವಿಜಯಕುಮಾರ, ಪುರುಷೋತ್ತಮ, ಮಲ್ಲಿಕಾರ್ಜುನ, ಟಿ.ಕೆ. ರಾಮಲಿಂಗ ಇತರರಿದ್ದರು.
ಚಲವಾದಿ ಮಹಾಸಭಾ: ಜಿಲ್ಲಾಧ್ಯಕ್ಷ ಡಿ. ಸೂರಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪದಾಧಿಕಾರಿಗಳಾದ ಸಂಗನಕಲ್ಲು ಸಿ. ಈಶ್ವರರಾವ್, ಜೆ.ಎಸ್. ಶ್ರೀನಿವಾಸ, ಕಂಪ್ಲಿ ಶ್ರೀನಿವಾಸ, ಸಿ. ಶ್ರೀನಿವಾಸ, ಸಿ. ಶಿವಕುಮಾರ್, ಕಪ್ಪಗಲ್ಲು ಓಂಕಾರಪ್ಪ, ತೊಲಮಾಮಿಡಿ ಬಿ. ನಾಗರಾಜ, ಸಿ. ಶಂಕರ್, ಕೆ.ನಾಗೇಂದ್ರ, ಟಿ. ಶೇಷಪ್ಪ, ಡಿ.ಎಚ್. ಹನುಮೇಶಪ್ಪ, ಟಿ. ಸುಂಕಪ್ಪ, ಗೋವಿಂದ, ಸಿ. ಅಮರನಾಥ್, ಸಿ. ವೆಂಕೋಬ, ಕಂದಕೂರು ರಾಮುಡು ಮತ್ತಿತರರಿದ್ದರು.
ದಲಿತ ಸಂಘರ್ಷ ಸಮಿತಿ(ಭೀಮವಾದ)ಜಿಲ್ಲಾ ಘಟಕದಿಂದ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು. ರಾಜ್ಯ ಸಮಿತಿ ಸದಸ್ಯ ಡಿ.ಎಚ್. ಹನುಮೇಶಪ್ಪ, ಓಂಕಾರಪ್ಪ, ಸಿ. ಶಿವಕುಮಾರ, ಜೆ.ಎಸ್. ಶ್ರೀನಿವಾಸ, ಸಂಗನಕಲ್ಲು ಸಿ. ಈಶ್ವರರಾವ್, ಸಿ. ಶಂಕರ್, ಕೆ. ನಾಗೇಂದ್ರ, ಟಿ. ಶೇಷಪ್ಪ, ಟಿ. ಸುಂಕಪ್ಪ, ಸಿ.ಅಮರ್ನಾಥ್ ಮತ್ತಿತರರಿದ್ದರು.
ಕರ್ನಾಟಕ ರಾಜ್ಯ ಡಾ. ಬಾಬು ಜಗಜೀವನ್ರಾಮ್ ಜನಜಾಗೃತಿ ವೇದಿಕೆ ಜಿಲ್ಲಾ ಶಾಖೆ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ವೇದಿಕೆ ರಾಜ್ಯಾಧ್ಯಕ್ಷ ಟಿ. ಪಂಪಾಪತಿ, ಜಿಲ್ಲಾಧ್ಯಕ್ಷ ಜೆ. ಸುಂಕಣ್ಣ, ರಾಮಚಂದ್ರಪ್ಪ, ಎಚ್.ಎಸ್. ಗಾದಿಲಿಂಗಪ್ಪ, ಶ್ರೀನಿವಾಸ, ಎಚ್. ಕೆಂಚಪ್ಪ, ಎಚ್. ಭೀಮಲಿಂಗಪ್ಪ, ಬಿ.ಎಸ್. ಗಂಗಾಧರ, ಆರ್. ಗೂಳಪ್ಪ, ಎಚ್. ಈರಣ್ಣ, ಎಚ್. ವೀರೇಶ್, ವೈ. ಅರುಣಾಚಲಂ, ಎಚ್. ಹುಲುಗಪ್ಪ, ರಘು, ಪಂಪಾಪತಿ, ಕಿರಣ್, ಅನಿಲ್ ಇತರರಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್ ಬಣದ ಜಿಲ್ಲಾ ಶಾಖೆಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಮಿತಿಯ ಪದಾಧಿಕಾರಿಗಳಾದ ತಳವಾರ ದುರುಗಪ್ಪ, ಪಿ. ತಾಯಪ್ಪ, ಈ. ಪರಶುರಾಮ, ಚಿಕ್ಕಗಾದಿಲಿಂಗಪ್ಪ, ಎಚ್. ಕುಮಾರಸ್ವಾಮಿ, ಎಚ್. ದುರುಗಣ್ಣ, ಎಚ್. ಹೊನ್ನೂರಪ್ಪ, ಸಿ. ಹನುಮಂತಪ್ಪ ಕೆ. ರಾಮಚಂದ್ರ, ಚಂದ್ರನಾಗರಾಜ, ಬ್ರಹ್ಮಯ್ಯ, ಎಚ್. ಈರಪ್ಪ ಮತ್ತಿತರರಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ್ ಬಣ) ಜಿಲ್ಲಾ ಶಾಖೆಯ ರಾಜ್ಯ ಸಂಘಟನಾ ಸಂಚಾಲಕ ಎ. ಮಾನಯ್ಯ, ಜಿಲ್ಲಾ ಸಂಚಾಲಕ ಎಸ್. ಕೆಂಚಪ್ಪ, ಪದಾಧಿಕಾರಿಗಳಾದ ಎಚ್. ಹುಸೇನಪ್ಪ, ಎಚ್. ಸಿದ್ದೇಶ್, ಎಂ. ಈಶ್ವರ್, ಎ.ಕೆ. ಗಂಗಾಧರ, ಜಿ.ಪಂಪಾಪತಿ, ಎ.ಕೆ. ಗಾದಿಲಿಂಗಪ್ಪ, ಎಕೆ ನಿಂಗಪ್ಪ, ಎಂ.ಎಸ್.ಭೀಮಶಂಕರ್, ರಾಮಲಿಂಗ, ರಾಜಣ್ಣ ಇತರರಿದ್ದರು.
ಕರ್ನಾಟಕ ದಸಂಸ (ಭೀಮವಾದ) ಜಿಲ್ಲಾ ಶಾಖೆಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಟಿ. ರಾಮಾಂಜಿನೇಯಲು, ಬಿ. ಮೋಹನ್, ವೆಂಕಟೇಶ್, ರಾಜು, ಆನಂದಕುಮಾರ್ ಇತರರಿದ್ದರು.