ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಏಡ್ಸ್ ತಡೆಗೆ ಸಹಕಾರ ಅಗತ್ಯ: ನರಸಿಂಹಮೂರ್ತಿ

Vishwanath S
Updated On : 8 Dec 2013, 11:31 am

ಬಳ್ಳಾರಿ: ಏಡ್ಸ್ ತಡೆಗಟ್ಟುವಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಯುವಜನರ, ಸಾರ್ವಜನಿಕರ, ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನರಸಿಂಹಮೂರ್ತಿ ಹೇಳಿದರು.
ನಗರದ ಮುನ್ಸಿಪಲ್ ಸರ್ಕಾರಿ ಪಪೂ ಕಾಲೇಜಿನಲ್ಲಿ ಏರ್ಪಡಿಸಿದ್ದ ಎಚ್ಐವಿ ಏಡ್ಸ್ ಕುರಿತ ಅರಿವು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಪ್ರಾಚಾರ್ಯ ಕೆ.ಎ. ನಾಗಭೂಷಣ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿಯ ಖಜಾಂಚಿ ಕಾಂಡ್ರಾ ಸತೀಶ್ ಮಾತನಾಡಿದರು. ಉಪನ್ಯಾಸಕಿ ವಸಂತಕುಮಾರಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಪೋಲಾ ಪ್ರವೀಣ್, ಉದ್ಯಮಿ ಲಕ್ಕೀಶ್, ವೇಣುಮಾಧವ್, ಉಪನ್ಯಾಸಕ ಎನ್. ಬಸವರಾಜ್, ವೇಣುಗೋಪಾಲ್, ಎನ್. ಬಸವರಾಜ್, ಎನ್ನೆಸ್ಸೆಸ್ ಅಧಿಕಾರಿ ವೆಂಕಟೇಶ್ ಹಾಗೂ ನಾಗಿರೆಡ್ಡಿ ಸೇರಿದಂತೆ ಇತರರು ಇದ್ದರು.
ಕಾಂಡ್ರಾ ಸತೀಶ್ ಎನ್ನೆಸ್ಸೆಸ್ನ 100 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ವಿಜೇತರು: ಚರ್ಚಾ ಸ್ಪರ್ಧೆಯಲ್ಲಿ ಬಿ. ಎರ್ರಿಸ್ವಾಮಿ ಪ್ರಥಮ, ಎ. ರಾಧಿಕಾ ದ್ವಿತೀಯ, ಕೆ. ಎರ್ರಿಸ್ವಾಮಿ ತೃತೀಯ. ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಟಿ. ಮಲ್ಲಿಕಾರ್ಜುನ ಪ್ರಥಮ, ಕೆ. ರವಿಚಂದ್ರ ದ್ವಿತೀಯ, ಕೆ. ಎರ್ರಿಸ್ವಾಮಿ ತೃತೀಯ. ಘೋಷಣೆಗಳ ಸ್ಪರ್ಧೆಯಲ್ಲಿ ಬಿ. ಚಂದ್ರಕಲಾ ಪ್ರಥಮ, ಬದಾಮಿ ಭಾಸ್ಕರ್ ದ್ವಿತೀಯ, ಎಂ. ಹರಿಣಿ ತೃತೀಯ ಬಹುಮಾನ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement