ಆಕಸ್ಮಿಕ ಬೆಂಕಿ ತಗುಲಿ ಸಿಲಿಂಡರ್ ಸ್ಫೋಟ
ಕಂಪ್ಲಿ: ಕಂಪ್ಲಿ- ಗಂಗಾವತಿ ಬೈಪಾಸ್ ರಸ್ತೆಯಲ್ಲಿನ ಹೋಟೆಲ್ನಲ್ಲಿ ಆಕಸ್ಮಿಕ ಬೆಂಕಿ ತಗುಲಿ, ಗ್ಯಾಸ್ ಸಿಲಿಂಡರ್ವೊಂದು ಸ್ಫೋಟವಾದ ಘಟನೆ ಸೋಮವಾರ ಜರುಗಿದೆ. ಫಕ್ರುದ್ದೀನ್ ಎಂಬಾತನ ನ್ಯೂ ಸ್ಟಾರ್ ಹೊಟೇಲ್ನಲ್ಲಿ ಸೋಮವಾರ ಬೆಳಗಿನ ಜಾವ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಅನಂತರ ಅದು ವ್ಯಾಪಕವಾಗಿ ಹರಡಿ ಗ್ಯಾಸ್ ಸಿಲಿಂಡರ್ ಸಿಡಿದಿದೆ. ಬೆಂಕಿಗೆ ಎರಡು ಫ್ರಿಜ್, ಕೂಲ್ ಡ್ರಿಂಕ್ಸ್, ವಾಟರ್ ಬಾಟಲ್ಗಳು, ಆಹಾರ ಪದಾರ್ಥ, ಪ್ಲಾಸ್ಟಿಕ್ ಚೇರ್ಗಳು ಸುಟ್ಟಿದ್ದು, ಮೇಲ್ಛಾವಣಿಗೆ ಹಾಕಿದ ತಗಡಿನ ಶೀಟ್ಗಳು ಜಖಂಗೊಂಡಿವೆ.
ಸುಮಾರು ರು. 2 ಲಕ್ಷ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಕ್ಕದ ಗುಜರಿ ಅಂಗಡಿಗೂ ಬೆಂಕಿ ತಗುಲಿದ್ದು, ಕೆಲ ಸಾಮಾನುಗಳು ಬೆಂಕಿಗೆ ಆಹುತಿಯಾಗಿವೆ. ಪಿಎಸ್ಐ ಡಿ. ಹುಲುಗಪ್ಪ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
--