ಇಂದು ಭ್ರಷ್ಟಾಚಾರ ವಿರೋಧಿ ದಿನ
ಬಳ್ಳಾರಿ: ನೆಹರು ಯುವ ಕೇಂದ್ರ, ಶ್ರೀಧರಗಡ್ಡೆಯ ಶ್ರೀ ಬಸವೇಶ್ವರ ಯುವ ಕಲಾ ಸಂಘದ ಸಹಯೋಗದಲ್ಲಿ ಡಿ. 10ರಂದು ಸಂಜೆ 5ಕ್ಕೆ ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಮಾನವನ ಹಕ್ಕುಗಳು ಹಾಗೂ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀಧರಗಡ್ಡೆ ಗ್ರಾಪಂ ಅಧ್ಯಕ್ಷ ವಿ. ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಪಂ ಸದಸ್ಯೆ ಎಸ್.ಬಿ. ಗಂಗಮ್ಮ ಅಧ್ಯಕ್ಷತೆ ವಹಿಸುವರು. ಯು. ಬಸವಲಿಂಗಪ್ಪ, ಎಸ್.ಬಿ. ನಂದೀಶ್ ಹಾಗೂ ಬಸವೇಶ್ವರ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಎಂ. ಬಸಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಬಳ್ಳಾರಿ: ಜಿಲ್ಲಾಡಳಿತದ ವತಿಯಿಂದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಡಿ. 10ರಂದು ಬೆಳಗ್ಗೆ 9.30ಕ್ಕೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ತಪ್ಪದೆ ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರಸ್ಕಾರ: ಅರ್ಜಿ ಆಹ್ವಾನ
ಕೊಟ್ಟೂರು: ಮಾದಿಗ ವಿದ್ಯಾರ್ಥಿ ಪರಿಷತ್‌ನ ಬಳ್ಳಾರಿ ಜಿಲ್ಲೆಯ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗ ರಾಜ್ಯ ಮಟ್ಟದಲ್ಲಿ ಪುರಸ್ಕಾರ ನೀಡಲಾಗುತ್ತಿದ್ದು, ಜಿಲ್ಲೆಯ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ತಾಂತ್ರಿಕ ಪದವಿಯಲ್ಲಿ ಶೇ. 80ಕ್ಕೂ ಹೆಚ್ಟು ಅಂಕಪಡೆದ ಮಾದಿಗ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ನಕಲು ಜಾತಿ ಮತ್ತು ಆದಾಯ ಪ್ರಮಾಣಗಳುಳ್ಳ ವಿವರಗಳನ್ನು ಡಿ. 15ರೊಳಗಾಗಿ ತುಮಕೂರಿನಲ್ಲಿ ಕಾರ್ಯಾಲಯ ಹೊಂದಿರುವ ಮಾದಿಗ ವಿದ್ಯಾರ್ಥಿ ಪರಿಷತ್‌ಗೆ ಕಳುಹಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ ರಾಹುಲ್ ಬಳ್ಳಾರಿ-99016046630, ವಿಜಯ ಬಳ್ಳಾರಿ- 9986561142, ಮಹೇಶ್ ಕೂಡ್ಲಿಗಿ- 8277612559, ತಿಮ್ಮಪ್ಪ ಕೊಟ್ಟೂರು- 8105274952 ಮತ್ತು ಪರಶುರಾಮ್ ಕೊಟ್ಟೂರು- 9739303332ನ್ನು ಸಂಪರ್ಕಿಸಬಹುದು ಎಂದು ಪರಿಷತ್‌ನ ರಾಜ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಆರೋಗ್ಯ ತಪಾಸಣೆ
ಬಳ್ಳಾರಿ: ತಾಲೂಕಿನ ಶಿಡಿಗಿನಮೊಳ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕೀಟನಾಶಕದಿಂದ ಆಗುವ ದುಷ್ಪರಿಣಾಮಗಳ ಕುರಿತ ವಿಮ್ಸ್ ಹಾಗೂ ಜಾನಕಿ ಕಾರ್ಪ್ ಲಿಮಿಟೆಡ್ ಸಹಯೋಗದಲ್ಲಿ ಕಾರ್ಯಾಗಾರ ನಡೆಯಿತು. ಜಾನಕಿ ಲಿಮಿಟೆಡ್‌ನ ಮುಖ್ಯ ವ್ಯವಸ್ಥಾಪಕ ನರಹರರೆಡ್ಡಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಎಚ್. ಹುಲುಗಪ್ಪ, ವೈದ್ಯಾಧಿಕಾರಿ ಮಲ್ಲಿಕಾರ್ಜುನ, ವಿಮ್ಸ್ ಪ್ರಾಧ್ಯಾಪಕಿ ಡಾ. ಮೋದಿನಿ, ಡಾ. ಲಿಂಗರಾಜ್, ಶಿಕ್ಷಕ ತಾಯಪ್ಪ, ತಿಪ್ಪೇಸ್ವಾಮಿ, ವೀರಾರೆಡ್ಡಿ, ಸಿದ್ಧಲಿಂಗೇಶ್ವರ ಇದ್ದರು.
ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಸಭೆ
ಕಂಪ್ಲಿ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿ, 2008ರಿಂದ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂಪೂರ್ಣ ನಲುಗಿ ಹೋಗಿದ್ದಾರೆ. ಕೆ.ಸಿ. ಕೊಂಡಯ್ಯ ನಿವೇಶನ ವಿಷಯ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದ್ದು, ಸಹನೆಯಿಂದ ವರ್ತಿಸಬೇಕಿದೆ. ವಿನಾಕಾರಣ ಪ್ರಕರಣವನ್ನು ಮಾಧ್ಯಮಗಳ ಮುಂದೆ ಜಗ್ಗಾಡುವುದು ತರವಲ್ಲ. ಬ್ಲಾಕ್ ಮುಖಂಡರು ಭಿನ್ನಾಭಿಪ್ರಾಯ ತೊರೆದು, ಕ್ಷೇತ್ರದ ಅಭಿವೃದ್ಧಿ ಹಾಗೂ ಜನತೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಮುಂದಾಗಬೇಕು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಪಿಸಿಸಿ ಕಾರ್ಯಕಾರಿ ಸಮಿತಿ ಎಸ್ಸಿ ಘಟಕದ ಸದಸ್ಯರಾಗಿ ಆಯ್ಕೆಯಾದ ಬಿ. ನಾಗೇಶ್ವರರಾವ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸರ್ಕಾರಿ ನಾಮಿನಿಗಳಾಗಿ ಆಯ್ಕೆಯಾದ ಕಂಪ್ಲಿಯ ಟಿ. ಸತ್ಯನಾರಾಯಣ, ದೇವಸಮುದ್ರ ಚನ್ನಬಸವ, ಹಂಪಾದೇವನಹಳ್ಳಿ ಫಕ್ಕೀರಪ್ಪ, ಶ್ರೀರಾಮ ರಂಗಾಪುರ, ಕೆ. ರಮೇಶ್, ದೇವಲಾಪುರ ಜಂಬಣ್ಣರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ. ಸುಧೀರ್, ಎಂ. ರಾಜೇಂದ್ರಕುಮಾರ್, ಪಿ. ಮೂಕಯ್ಯಸ್ವಾಮಿ, ಸೈಯ್ಯದ್ ಉಸ್ಮಾನ್, ಪುರಸಭೆ ಸದಸ್ಯರಾದ ಸಿ.ಆರ್. ಹನುಮಂತ, ಭಟ್ಟಾ ಪ್ರಸಾದ್, ಬಿ. ನಾಗರಾಜ್, ಎಂ. ಸುರೇಶ್, ಕೆ.ಎಸ್. ರಾಜಾಸಾಬ್, ಮಾದನೂರು ಮಹೇಶ್, ಎಚ್. ರಮೇಶ್ ಗೌಡ, ಜೆ.ಜಿ. ಬಸವರಾಜ್, ಗೋನಾಳ್ ನಾಗರಾಜ್, ಕಂಪ್ಲಿ ಈರಣ್ಣ ಇದ್ದರು.