ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಎಲ್‌ಎಲ್ ಕಾಲುವೆಗೆ ನೀರು ಬಿಡುವಂತೆ ಮನವಿ

Lingaraj Badiger
Updated On : 10 Dec 2013, 11:30 am

ಬಳ್ಳಾರಿ: ತುಂಗಭದ್ರಾ ಜಲಾಶಯದ ಎಲ್‌ಎಲ್ ಕಾಲುವೆಗೆ ಆಂಧ್ರಪ್ರದೇಶದ ಮತ್ತು ಕರ್ನಾಟಕದ ಪಾಲಿನ ನೀರನ್ನು ಜಂಟಿಯಾಗಿಯೇ ಬಿಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ ಅವರಿಗೆ ಮನವಿ ಸಲ್ಲಿಸಿವೆ.
ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಳ್ಳಾರಿಗೆ ಆಗಮಿಸಿದ್ದ ಪರಮೇಶ್ವರ್ ನಾಯ್ಕ ಅವರನ್ನು ಭೇಟಿ ಮಾಡಿದ ಸಂಘಟನೆ ಮುಖಂಡರು, ತುಂಗಭದ್ರಾ ಜಲಾಶಯ ನಿರ್ಮಾಣವಾದಾಗಿನಿಂದಲೂ ಎಲ್‌ಎಲ್ ಕಾಲುವೆಗೆ ಆಂಧ್ರ ಮತ್ತು ಕರ್ನಾಟಕ ರಾಜ್ಯಗಳು ಜಂಟಿಯಾಗಿಯೇ ನೀರು ಬಿಡುತ್ತಿದ್ದವು.ಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಆಂಧ್ರ ಪ್ರದೇಶವು ಜಂಟಿಯಾಗಿ ನೀರನ್ನು ತೆಗೆದುಕೊಳ್ಳದೇ ಕರ್ನಾಟಕದ ಪಾಲಿನ ನೀರು ಮಾರ್ಚ್ ಮುಗಿದ ನಂತರ ಏಪ್ರಿಲ್‌ನಿಂದ ಜೂನ್‌ವರೆಗೆ ಆಂಧ್ರ ನೀರು ಪಡೆಯುತ್ತಿದೆ. ರಾಜ್ಯದ ರೈತರಿಗೆ ಕಾಲುವೆಯಲ್ಲಿ ಕಡಿಮೆ ಪ್ರಮಾಣದ ನೀರಿನಿಂದ ಮೋರಿಗಳಿಗೆ ನೀರು ಏರದೇ ಜಮೀನುಗಳಿಗೆ ನೀರು ದೊರೆಯದೆ ಬೆಳೆಯಲ್ಲಾ ಹಾಳಾಗಿ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ.
ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಆಂಧ್ರ ಮತ್ತು ಕರ್ನಾಟಕ ಜಂಟಿಯಾಗಿಯೇ ನೀರನ್ನು ಒಟ್ಟಿಗೆ ಬಿಡಲು ಅಂಗಿಕಾರವಾಗಿದ್ದರೂ, ಈವರೆಗೂ ಆಂಧ್ರಪ್ರದೇಶ ಯಾವುದೆ ತೀರ್ಮಾನಕ್ಕೆ ಬಾರದೆ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಕೂಡಲೆ ಗಮನಹರಿಸಿ, ತುಂಗಭದ್ರಾ ಮಂಡಳಿ ಅಧಿಕಾರಿಗಳ ಸಭೆ ಕರೆದು ತಕ್ಷಣ ಎಲ್‌ಎಲ್ ಕಾಲುವೆಗೆ ಆಂಧ್ರ ಹಾಗೂ ಕರ್ನಾಟಕ ಜಂಟಿಯಾಗಿಯೇ ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜೆ. ಪುರುಷೋತ್ತಮಗೌಡ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement