ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರು. 5 ಲಕ್ಷ ಮೌಲ್ಯದ ವಸ್ತು ಕಳವು

Lingaraj Badiger
Updated On : 12 Dec 2013, 11:28 am

ಬಳ್ಳಾರಿ: ಹೊತ್ತೂರ್ ಇಸ್ಪಾತ್ ಪ್ರೈ.ಲಿ. ಸ್ಪಾ ಐರನ್ ಫ್ಯಾಕ್ಟರಿಯಲ್ಲಿನ ರು. 5 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ತಾಲೂಕಿನ ವೇಣಿವೀರಾಪುರ ಸಮೀಪದ ಫ್ಯಾಕ್ಟರಿಯಲ್ಲಿ ಡಿ. 8ರಂದು ರಾತ್ರಿ ಸಂಭವಿಸಿದೆ. ಫ್ಯಾಕ್ಟರಿ ಒಳಗೆ ಹೋದ ಕಳ್ಳರು ಅಲ್ಲಿನ ಸ್ಟಾಕ್‌ಯಾರ್ಡ್‌ನಲ್ಲಿದ್ದ ಫ್ಯಾಕ್ಟರಿಗೆ ಸಂಬಂಧಪಟ್ಟ ವಸ್ತುಗಳನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ಟ್ರ್ಯಾಕ್ಟರ್ ಜಪ್ತಿ
ಬಳ್ಳಾರಿ: ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಮೂರು ಟ್ರ್ಯಾಕ್ಟರ್‌ಗಳನ್ನು ಸೀಜ್ ಮಾಡಿ, 6 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡಿರುವ ಘಟನೆ ಗುಗ್ಗರಹಟ್ಟಿಯಲ್ಲಿ ನಡೆದಿದೆ. ಬಳ್ಳಾರಿ ಗ್ರಾಮೀಣ ಪೊಲೀಸರು ಗಸ್ತು ತಿರುಗುತ್ತಿರುವಾಗ ಪರವಾನಗಿ ಮರಳು ಸಾಗಿಸುತ್ತಿದ್ದಾಗ ವಿಚಾರಣೆ ಮಾಡಲಾಗಿ, ಮರಳು ಸಾಗಿಸಲು ಯಾವುದೇ ದಾಖಲೆ ಇಲ್ಲದ ಕಾರಣ, ಮರಳನ್ನು ಟ್ರ್ಯಾಕ್ಟರ್ ಟ್ರಾಲಿ ಸಮೇತ ಪೊಲೀಸರು ಸೀಜ್ ಮಾಡಿದ್ದಾರೆ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement