ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಲ್ಲಭಭಾಯಿ ಪಟೇಲ್ ಎಲ್ಲರಿಗೂ ಮಾದರಿ: ಕಲ್ಯಾಣ ಸ್ವಾಮೀಜಿ

Lingaraj Badiger
Updated On : 16 Dec 2013, 11:20 am

ಬಳ್ಳಾರಿ: ವಲ್ಲಭಬಾಯಿ ಪಟೇಲ್ ದೇಶಪ್ರೇಮಿಯಾಗಿ ಭಾರತವನ್ನು ಒಗ್ಗೂಡಿಸಲು ಕಟಿಬದ್ಧರಾಗಿದ್ದು, ಅವರ ದೇಶಪ್ರೇಮ ಎಲ್ಲರಿಗೂ ಮಾದರಿಯಾಗಿದೆ ಎಂದು ಕಲ್ಯಾಣಸ್ವಾಮಿಗಳು ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಬೆಳಗ್ಗೆ ಲೋಹ ಸಂಗ್ರಹಣಾ ಸಮಿತಿಯಿಂದ ಏರ್ಪಡಿಸಿದ್ದ ಭಾರತಕ್ಕಾಗಿ ಏಕತಾ ಓಟದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಎಂಎಫ್ ರಾಜ್ಯಾಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಹಾಗೂ ವೈದ್ಯ ಡಾ.ಬಿ.ಕೆ. ಶ್ರೀನಿವಾಸಮೂರ್ತಿ ಉದ್ಘಾಟಿಸಿದರು. ಸೋಮಶೇಖರ ರೆಡ್ಡಿ, ವಿಪ ಸದಸ್ಯ ಮೃತ್ಯುಂಜಯ ಜಿನಗಾ ನೇತೃತ್ವದಲ್ಲಿ ನೂರಾರು ಜನರು ದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ ಕೊಟ್ಟೂರುಸ್ವಾಮಿ ಮಠದವರೆಗೆ ಓಟ ನಡೆಸಿದರು. ಕೆ. ಬಸವರಾಜ್, ಪಟೇಲ್ ಸಿದ್ದಾರೆಡ್ಡಿ, ಅಲ್ಲಂ ಗುರುಬಸವರಾಜ್, ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ಶಿವಕುಮಾರ್, ಹೀಮಂತರಾಜ್, ಡಾ. ಮಹಿಪಾಲ್, ಕೆ.ಎ. ರಾಮಲಿಂಗಪ್ಪ, ವಿರೂಪಾಕ್ಷಗೌಡ, ಮುರಾಹರಿಗೌಡ, ತಿಮ್ಮಾರೆಡ್ಡಿ ಇದ್ದರು. ನಾಗರಾಜ್ ಸ್ವಾಗತಿಸಿದರು. ಅನಿಲ್ ನಾಯ್ಡು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement