100 ಕ್ವಿಂಟಲ್ ಮೆಕ್ಕೆಜೋಳ ಬೆಂಕಿಗಾಹುತಿ
ಹೂವಿನಹಡಗಲಿ: ತಾಲೂಕಿನ ನವಲಿ ಗ್ರಾಮದ ಬಾವಿಹಳ್ಳಿ ಸಿರಾಜ್ ಎಂಬ ರೈತರಿಗೆ ಸೇರಿದ್ದ ಜಮೀನಿನಲ್ಲಿ ಹಾಕಲಾಗಿದ್ದ ಮೆಕ್ಕೆಜೋಳಕ್ಕೆ ಸೋಮವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 100 ಕ್ವಿಂಟಲ್ಗೂ ಹೆಚ್ಚು ಮೆಕ್ಕೆಜೋಳ ಬೆಂಕಿಗೆ ಆಹುತಿಯಾಗಿದೆ. ಈ ಘಟನೆಯಿಂದಾಗಿ ರೈತ ಸಿರಾಜ್ಗೆ ಸುಮಾರು ರು. 1.30 ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ನಿರೀಕ್ಷಕ ಸಿ.ಎಂ. ಕೊಟ್ರೇಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ.