ಕರಾವಿಪ ನೂತನ ಜಿಲ್ಲಾ ಸಮಿತಿ ರಚನೆ
ಬಳ್ಳಾರಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ (ಕರಾವಿಪ) ನೂತನ ಜಿಲ್ಲಾ ಸಮಿತಿಯನ್ನು ಸರ್ಕಾರಿ ಪಪೂ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರಚಿಸಲಾಯಿತು.
ಕರಾವಿಪ ಕೇಂದ್ರ ಸಮಿತಿಯ ಖಜಾಂಚಿ ಗಿರೀಶ್ ಕಡ್ಲೆವಾಡ ವೀಕ್ಷಕರಾಗಿ ಆಗಮಿಸಿದ್ದರು. ವಿಜ್ಞಾನ ಬರಹಗಾರ ಮತ್ತು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ವಿಶೇಷ ಕರ್ತವ್ಯಾಧಿಕಾರಿ ಪುರುಷೋತ್ತಮ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು.
ಅಧ್ಯಕ್ಷರಾಗಿ ಡಾ.ಬಿ. ಗೋವಿಂದರಾಜು, ಉಪಾಧ್ಯಕ್ಷರಾಗಿ ಎಸ್. ಮಂಜುನಾಥ, ಬಿ. ರಾಜಾಖಾನ್, ಖಜಾಂಚಿ ಟಿ.ಪಿ. ವೀರೇಂದ್ರ, ಕಾರ್ಯದರ್ಶಿ ಎಸ್.ಎಂ. ಕೊಟ್ರುಸ್ವಾಮಿ, ಸಹ ಕಾರ್ಯದರ್ಶಿ ವಿ. ವಸಂತ್ ಮತ್ತು ಸಮಿತಿ ಸದಸ್ಯರಾಗಿ ಟಿ. ಮಲ್ಲಿಕಾರ್ಜುನ, ಎಸ್. ವಿಶ್ವನಾಥ, ಗುರುರಾಜ ಜೋಷಿ ಹಾಗೂ ಮಹಿಳಾ ಪ್ರತಿನಿಧಿಯಾಗಿ ವಿಜೇತಾ ಇವರನ್ನೊಳಗೊಂಡ ಜಿಲ್ಲಾ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಡಾ. ವೆಂಕಟಯ್ಯ ಅಪ್ಪಗೆರೆ, ಖನಿಜ ಮತ್ತು ಭೂ ವಿಜ್ಞಾನ ಇಲಾಖೆಯ ಎನ್. ತಿಪ್ಪಾರೆಡ್ಡಿ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರಸಾದ್ ರೆಡ್ಡಿ, ಶೇಖರ್ ಹೊರಪೇಟೆ, ಕೆ.ಎಂ. ಮಂಜುನಾಥ, ಪ್ರದೀಪ್ ಭೂಸನೂರ್ಮಠ, ಎಚ್.ಜಿ. ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.