ಅಪರಿಚಿತರಿಂದ ಸಾರ್ವಜನಿಕರು ಎಚ್ಚರದಿಂದಿರಿ: ರವಿಕುಮಾರ್
ಬಳ್ಳಾರಿ: ಸಾರ್ವಜನಿಕರು ತಮ್ಮ ಮನೆಗಳ ಬಳಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬಂದು ಹೋಗುವ ಅಪರಿಚಿತರಿಂದ ಎಚ್ಚರವಿರಬೇಕೆಂದು ಗಾಂಧಿನಗರ ಪೊಲೀಸ್ ಠಾಣೆ ಪಿಐ ಜಿ.ಸಿ. ರವಿಕುಮಾರ್ ಮನವಿ ಮಾಡಿದರು.
ಸ್ಥಳೀಯ ಅಂಬೇಡ್ಕರ್ ನಗರದ ಸಮುದಾಯ ಭವನದ ಬಳಿ ಮಹಾನಂದಿ ಕೊಟ್ಟಂ, ಕನ್ನಡನಗರ, ಭಗತ್ಸಿಂಗ್ ನಗರ ಮತ್ತು ಅಂಬೇಡ್ಕರ್ ನಗರದ ನಿವಾಸಿಗಳಿಗಾಗಿ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಅವರು ಮಾತನಾಡಿದರು. ಮನೆಯಿಂದ ಬಹಳ ದಿನಗಳವರೆಗೆ ಹೊರಗಡೆ ಹೋದಲ್ಲಿ ಅಕ್ಕಪಕ್ಕದವರಿಗೆ ತಿಳಿಸಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಎಟಿಎಂನಿಂದ ಹಣ ಬಾರದಿದ್ದಾಗ ಅಪರಿಚಿತರು ಸಹಾಯಕ್ಕೆ ಬಂದಂತೆ ಮಾಡಿ ಎಟಿಎಂ ಕಾರ್ಡ್ನ್ನು ಬದಲಿಸಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು. ಗಾಂಧಿನಗರ ಠಾಣೆಯ ಪಿಎಸ್ಐ ವಿ. ಚಂದನ್ ಗೋಪಾಲ್, ಎಂ. ನಜೀರ್ ಅಹಮ್ಮದ್, ಪಾಲಿಕೆ ಸದಸ್ಯೆ ಡಿ. ಲಕ್ಷ್ಮೀ ನಾರಾಯಣಪ್ಪ, ಡಿ. ನಾರಾಯಣಪ್ಪ ಉಪಸ್ಥಿತರಿದ್ದರು.